ಲಾಡೆನ್ ಹೆಣ ತಡಕಲು ಪಾತಾಳಗರಡಿ ಹಿಡಿದ ಅಮೆರಿಕ ಆಸಾಮಿ
ಕ್ಯಾಲಿಫೋರ್ನಿಯಾ,
ಜೂನ್ 13: 'ಲಾಡೆನ್ ಹತ್ಯೆ ಬಳಿಕ ಅವನ ಶವವನ್ನು ಅರಬ್ಬಿಸಮುದ್ರದಲ್ಲಿ ಬಿಸಾಡಿದೆವು' ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಾಕ್ಷಾತ್ ಹೇಳಿದ್ದರೂ ಅದನ್ನು ನಂಬಲು ಅಮೆರಿಕದ ಸಾಗರ ಶೋಧಕನೊಬ್ಬ ಸಿದ್ಧನಿಲ್ಲ. ಒಬಾಮಾ ಹೇಳಿದ್ದರ ಸತ್ಯ-ಮಿಥ್ಯತೆಯನ್ನು ಅರಿಯಲು ಕ್ಯಾಲಿಫೋರ್ನಿಯಾದ 59 ವರ್ಷದ ಬಿಲ್ ವಾರೆನ್ ಸಮುದ್ರದಾಳಕ್ಕೆ ಇಳಿದು, ಲಾಡೆನ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. id="toptextpromo">'ನಾನೊಬ್ಬ
ದೇಶಭಕ್ತ ಅಮೆರಿಕದವ. ಲಾಡೆನ್ ನನ್ನು ಸಾಯಿಸಿದ್ದೇವೆ ಎಂಬುದಕ್ಕೆ ಒಬಾಮಾ ತಕ್ಕ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ನನಗೆ ಅಮೆರಿಕ ಸರಕಾರ ಅಥವಾ ಒಬಾಮಾ ಮೇಲೆ ನಂಬಿಕೆ ಇಲ್ಲ. ಲಾಡೆನ್ ಸಾವು ಖಚಿತಪಡಿಸಿಕೊಳ್ಳಲು ಶೋಧಕ್ಕೆ ನಾನೇ ಸ್ವತಃ ಮುಂದಾಗಿದ್ದೇನೆ' ಎಂದು ವಾರೆನ್ ಸಮುದ್ರಕ್ಕೆ ಧುಮಕಿದ್ದಾರೆ. ಅವನ ಶವ ಸಿಕ್ಕ ತಕ್ಷಣ ಡಿಎನ್ಎ ಟೆಸ್ಟ್ ಮಾಡಿ, ಒಸಾಮಾ ಸತ್ತಿದ್ದಾನೆ ಎಂದು ಇಡೀ ಜಗತ್ತಿಗೆ ಮನದಟ್ಟುಪಡಿಸುವ ಶಪಥ ವಾರೆನ್ ಅವರದ್ದಾಗಿದೆ. id='are-slot-1' class='oiad oi-axt oiadv'> id='top-searched-articles'>ಅತ್ಯಾಧುನಿಕ
ಉಪಕರಣಗಳು, ಹಲವು ಬೋಟ್‌ಗಳೊಂದಿಗೆ ಲಾಡೆನ್ ಶೋಧಕ್ಕೆ ವಾರೆನ್ ಮುಂದಾಗಿದ್ದಾರೆ. ಈ ಕಾರ್ಯಕ್ಕಾಗಿ ನಾಲ್ಕು ಲಕ್ಷ ಡಾಲರ್ ಹಣ ವ್ಯಯಿಸುತ್ತಿದ್ದಾರೆ. ಇಲ್ಲಿವರೆಗೂ ಅಮೆರಿಕ ಲಾಡೆನ್‌ನನ್ನು ಅರಬ್ಬಿಸಮುದ್ರದ ಉತ್ತರ ಭಾಗದಲ್ಲಿ ಹೂಳಲಾಗಿದೆ ಎಂದಷ್ಟೇ ಹೇಳಿದೆ. ವಿಶಾಲವಾದ ಅರಬ್ಬಿಸಮುದ್ರದಲ್ಲಿ ಲಾಡೆನ್ ಶವವನ್ನು ವಾರೆನ್ ಹೇಗೆ ಹುಡುಕುತ್ತಾರೆ ಎಂಬುದು ಸದ್ಯದ ಕುತೂಹಲ.











Click it and Unblock the Notifications