ಜೂ .15ರಂದು ಸಂಪೂರ್ಣ ಚಂದ್ರಗ್ರಹಣ ನೋಡಿ
ಬೆಂಗಳೂರು,
ಜೂ 12: ಮತ್ತೊಂದು ಖಗೋಳ ಕೌತುಕಕ್ಕೆ ವೇದಿಕೆ ಸಿದ್ಧವಾಗಿದೆ. ಜೂ 15 ರಂದು ಸಂಭವಿಸುವ ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಈ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. id="toptextpromo">ಜೂ
15ರ ರಾತ್ರಿ 11.52 ಗಂಟೆಯಿಂದ ಜೂ 16ರ 2.32 ಗಂಟೆವರೆಗೆ ಚಂದ್ರನ ಮೇಲೆ ಭೂಮಿಯ ನೆರಳು ಬೀಳಲಿದೆ. ಜೂನ್ 2 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಿದ್ದು, ಭಾರತದಲ್ಲಿ ಗೋಚರಿಸಿರಲಿಲ್ಲ. ಜೂ 15 ರ ದೀರ್ಘಾವಧಿ ಗ್ರಹಣವು ಭಾರತವಲ್ಲದೆ ದಕ್ಷಿಣ ಏಷ್ಯಾ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ಗೋಚರಿಸಲಿದೆ. id='are-slot-1' class='oiad oi-axt oiadv'> id='top-searched-articles'>ಡಿ
10, 2011ರಲ್ಲಿ ಸಂಭವಿಸುವ ಮುಂದಿನ ಚಂದ್ರಗ್ರಹಣ ಸಹ ಭಾರತದಲ್ಲಿ ಗೋಚರಿಸಲಿದೆ. ಆದರೆ, ಗ್ರಹಣದ ಕಾಲಾವಧಿ ಕೇವಲ 25 ನಿಮಿಷಗಳು ಮಾತ್ರ. ಇದನ್ನು ಬಿಟ್ಟರೆ ಮುಂದಿನ ಗ್ರಹಣಕ್ಕಾಗಿ 2018ರ ಜನವರಿ 31ರವರೆಗು ಕಾಯಬೇಕು ಎಂದು ಜವಹರಲಾಲ್ ನೆಹರೂ ತಾರಾಲಯದ ವಿಜ್ಞಾನಿಗಳು ಹೇಳಿದ್ದಾರೆ.











Click it and Unblock the Notifications