ಸುರಕ್ಷತೆ ಮೂಲ ಮಂತ್ರ ಎಂಬ ಕ್ರೋಮ್ 12 ಬಂದಿದೆ
ಕ್ಯಾಲಿಫೋರ್ನಿಯಾ
ಜೂ 8: ವೆಬ್ ಸರ್ಚ್ ದಿಗ್ಗಜ ಗೂಗಲ್ ತನ್ನ ಜನಪ್ರಿಯ ಬ್ರೌಸಿಂಗ್ ಉತ್ಪನ್ನ ಗೂಗಲ್ ಕ್ರೋಮ್ ನ ಹೊಸ ಆವೃತ್ತಿಯನ್ನು ಪರಿಚಯಿಸಿದೆ. ಕ್ರೋಮ್ 12 ರಲ್ಲಿ ಹೊಸ ಸೌಲಭ್ಯಗಳ ಜೊತೆಗೆ ಸುರಕ್ಷಿತ ಬ್ರೌಸಿಂಗ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. id="toptextpromo">ಸೇಫ್
ಬ್ರೌಸಿಂಗ್ ಸೌಲಭ್ಯದ ಮೂಲಕ ಮಾಲ್ ವೇರ್ ಗಳನ್ನು ತಡೆಗಟ್ಟಲು ಡೌನ್ ಲೋಡ್ ಆಗುವ ಪ್ರತಿ ಫೈಲ್ ಗಳನ್ನು ಸೂಕ್ಷ್ಮವಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಫಿಶಿಂಗ್ ಹಾಗೂ ಹಾನಿಕಾರಕ ವೆಬ್ ತಾಣಗಳ ಬಗ್ಗೆ ತಕ್ಷಣವೇ ಸೂಚನೆ ನೀಡಲಾಗುತ್ತದೆ. ಅಡೋಬ್ ಫ್ಲಾಶ್ ಪ್ಲೇಯರ್ ಗೆ ಹೆಚ್ಚಿನ ಸಹಕಾರ ಈ ಬ್ರೌಸರ್ ನೀಡುತ್ತಿದೆ. 3ಡಿ ಸಿಎಸ್ಎಸ್ ಗೆ ಬೆಂಬಲ ಇರುವುದರಿಂದ 3ಡಿ ಎಫೆಕ್ಟ್ ನೀಡುವ ವೆಬ್ ಅಪ್ಲಿಕೇಷನ್ ಹಾಗೂ ವೆಬ್ ಪುಟಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. id='are-slot-1' class='oiad oi-axt oiadv'> id='top-searched-articles'>ಕ್ರೋಮ್
12 ಅನ್ನು ವಿಂಡೋಸ್, ಮ್ಯಾಕ್ ಹಾಗೂ ಲೈನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಂಪ್ಯೂಟರ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಇನ್ನೇಕೆ ತಡ ಒಮ್ಮೆ ಡೌನ್ ಲೋಡ್ ಮಾಡಿ ಹೊಸ ಬ್ರೌಸಿಂಗ್ ಅನುಭವ ಪಡೆಯಿರಿ.











Click it and Unblock the Notifications