ಮುದ್ದಿನ ಡೊನಾಲ್ಡ್ ಡಕ್ ಗೆ ಹ್ಯಾಪಿ ಬರ್ತ್ ಡೆ ಹೇಳಿದಿರಾ!?
ಬೆಂಗಳೂರು,
ಜೂನ್ 9: ಅತ್ಯಂತ ಜನಪ್ರಿಯ ಡಿಸ್ನಿ ಕಾರ್ಟೂನ್ ಡೊನಾಲ್ಡ್ ಡಕ್‌ಗೆ ಇಂದು 77ರ ಹುಟ್ಟುಹಬ್ಬ. 1934ರಲ್ಲಿ ವಾಲ್ಟ್ ಡಿಸ್ನಿ ಮತ್ತು ಡಿಕ್ ಲುಂಡಿ ಅವರಿಂದ ರೂಪಿತಗೊಂಡ ಈ ಕಾರ್ಟೂನ್ 76 ವರ್ಷಗಳ ಬಳಿಕವೂ ತನ್ನ ಜನಪ್ರಿಯತೆಯನ್ನು ಹಿಂದಿನಂತೆಯೇ ಉಳಿದಿರುವುದು ಅದು ಪಡೆದಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. id="toptextpromo">ಡಿಸ್ನಿಯ
ಫ್ಯಾಬ್ ನ ಪಾತ್ರಗಳಾದ ಮಿಕ್ಕಿ ಮೌಸ್, ಮಿನ್ನಿ ಮೌಸ್, ಡೈಸಿ ಡಕ್, ಪೂಟೋಗಳ ಜತೆಗೆ ಡೊನಾಲ್ಡ್ ಡಕ್ ಕೂಡಾ ಸೇರಿದೆ. 1934ರ ಜೂನ್ 9ರಂದು ಮೊದಲ ಪ್ರದರ್ಶನ ಕಂಡ 'ದಿ ವೈಸ್ ಲಿಟ್ಲ್ ಹೆನ್' ಎಂಬ ಕಾರ್ಟೂನ್ ಚಿತ್ರದಲ್ಲಿ ಇತರೆ ಪಾತ್ರಗಳ ಜೊತೆಗೆ ಮೊದಲ ಬಾರಿಗೆ ಡೊನಾಲ್ಡ್ ಡಕ್ ಕಾಣಿಸಿಕೊಂಡಿತ್ತು. ಬಳಿಕ ಡೊನಾಲ್ಡ್ ಡಕ್‌ಗೆ ಸಿಕ್ಕ ಜನಪ್ರಿಯತೆಯಿಂದಾಗಿ 1937ರಲ್ಲಿ ಪ್ರತ್ಯೇಕ ಕಾರ್ಟೂನ್‌ಗಳನ್ನು ಬಿಡುಗಡೆ ಮಾಡಲಾಯಿತು. id='are-slot-1' class='oiad oi-axt oiadv'> id='top-searched-articles'>ವಾಲ್ಟ್
ಡಿಸ್ನಿ ಅವರು ಲಾಸ್ ಏಂಜಲೀಸ್ ಗೆ ಬರುವುದಕ್ಕೂ ಮುನ್ನ ತಮ್ಮ ಕಾರ್ಟೂನ್ ರಚನೆಗಳು ಮನ್ನಣೆ ಗಳಿಸದೆ ಭಾರಿ ಸೋಲುಂಡಿದ್ದರು. ಬ್ಯಾಂಕುಗಳಿಂದಲೂ ಹಣಕಾಸು ನೆರವು ದೊರಕಲಿಲ್ಲ. ಕೊನೆಗೆ, 1928ರಲ್ಲಿ ತಮ್ಮ ಕಾರನ್ನೇ ಮಾರಿ ಮಿಕ್ಕಿ ಮೌಸ್ ಗೆ ಜೀವ ತುಂಬಿದ್ದರು. 'ಸ್ನೊ ವೈಟ್ ಅಂಡ್ ಸೆವೆನ್ ಡ್ವಾರ್ಫ್ಸ್' ಬಾಕ್ಸಾಫೀಸಿನಲ್ಲಿ ಯಶ ಗಳಿಸಿದ ಬಳಿಕ ಡಿಸ್ನಿಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.











Click it and Unblock the Notifications