ಎಸ್ ಬಿಐನಲ್ಲಿ 5 ಸಾವಿರ ಉದ್ಯೋಗಾವಕಾಶ, ಗುಡ್ ಲಕ್

SBI to Hire 5,000 officers
ನವದೆಹಲಿ, ಜೂನ್ 8: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಮಾಡಬೇಕೆಂಬ ಬಯಕೆಯಲ್ಲಿರುವರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಯಾಕೆಂದರೆ, ದೇಶದ ಬೃಹತ್ ಹಣಕಾಸು ಸಂಸ್ಥೆ ಸುಮಾರು 5 ಸಾವಿರ ಪ್ರೊಬೆಷನರಿ ಆಫೀಸರ್ಸ್ ಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲೂ ಉದ್ಯೋಗಾವಕಾಶಗಳಿವೆ.

ಎಸ್ ಬಿಐ ಹೆಚ್ಚಿನ ನೇಮಕಾತಿಯನ್ನು ತನ್ನ ಸಹಬ್ಯಾಂಕ್ ಗಳಿಗೆ ಮಾಡಿಕೊಳ್ಳಲಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ 843 ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದೆ. ಈಗಾಗಲೇ ಎಸ್ ಬಿಐ ಸಾರ್ವಜನಿಕ ಜಾಹೀರಾತುಗಳನ್ನು ನೀಡಲು ಆರಂಭಿಸಿದೆ.

ತನ್ನ ಸಹಬ್ಯಾಂಕ್ ಗಳಲ್ಲಿನ ಪ್ರೊಬೆಷನರಿ ಹುದ್ದೆಗಳಿಗಾಗಿ ಎಸ್ ಬಿಐ ಸಿಬ್ಬಂದಿ ನೇಮಕಮಾಡಿಕೊಳ್ಳಲಿದೆ. ಇದರಲ್ಲಿ ಕಾನೂನು, ಅರ್ಥಶಾಸ್ತ್ರ ಮತ್ತು ಭದ್ರತಾ ವಿಭಾಗದ ಉದ್ಯೋಗಗಳೂ ಸೇರಿವೆ.

ಉಳಿದಂತೆ ಸ್ಟೇಟ್ ಬ್ಯಾಂಕ್ ಆಫ್ ಬಿಕಾನರ್ ಮತ್ತು ಜೈಪುರಕ್ಕೆ 1 ಸಾವಿರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗೆ 1,416 ಸಿಬ್ಬಂದಿ ಗಳನ್ನು ನೇಮಕ ಮಾಡಿಕೊಳ್ಳಲಿದೆ. ಉಳಿದ ಸಹ ಬ್ಯಾಂಕ್ ಗಳೂ ಸೇರಿದಂತೆ ಒಟ್ಟು 5 ಸಾವಿರ ಜನರಿಗೆ ಉದ್ಯೋಗಾವಕಾಶವಿದೆ.

ಕಳೆದ ವರ್ಷ ಎಸ್ ಬಿಐ 27 ಸಾವಿರ ಜನರನ್ನು ನೇಮಕ ಮಾಡಿಕೊಂಡಿತ್ತು. 2011-12 ಆರ್ಥಿಕ ವರ್ಷದಲ್ಲಿ ಎಸ್ ಬಿಐ ಒಟ್ಟಾರೆ 45 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಯೋಜನೆಯೂ ಬ್ಯಾಂಕ್ ಗಿದೆ. ಅರ್ಜಿ ಹಾಕುವ ವಿವರಗಳಿಗಾಗಿ ಎಸ್ ಬಿಐ ಪ್ರಕಟಿಸುವ ಪತ್ರಿಕಾ ಜಾಹೀರಾತುಗಳನ್ನು ಗಮನಿಸಲು ಆರಂಬಿಸಿ. ಗುಡ್ ಲಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+