ಪಂಡಿತ ಪ್ರೊ. ಲಿಂಗದೇವರು ಹಳೇಮನೆ (62) ನಿರ್ಗಮನ

Prof Lingadevaru Halemane
ಮೈಸೂರು, ಜೂ. 8 : ವಿದ್ವಾಂಸ, ಭಾಷಾ ಶಾಸ್ತ್ರಜ್ಞ ಮತ್ತು ರಂಗಾಯಣ ನಿರ್ದೇಶಕ ಪ್ರೊ. ಲಿಂಗದೇವರು ಹಳೇಮನೆ ( 62) ಇನ್ನಿಲ್ಲ. ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ತುತ್ತಾದ ಅವರನ್ನು ಅಪೋಲೋ ಅಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಚೇತರಿಸಿಕೊಳ್ಳಲಿಲ್ಲ.

ಮೃತರು ಹೆಂಡತಿ ನಂದಾ ಮತ್ತು ಹೆಣ್ಣ ಮಕ್ಕಳು ಭೂಮಿಕಾ ಮತ್ತು ನಿಹಾರಿಕಾ ಅವರನ್ನು ಅಗಲಿದ್ದಾರೆ. ಗೆಳೆಯರ ಬಳಗಕ್ಕೆ, ಶಿಷ್ಯವರ್ಗಕ್ಕೆ ಹಳೇಮನೆ ಎಂದೇ ಆತ್ಮೀಯರಾಗಿದ್ದ ಅವರ ಅಗಲಿಕೆ ಅನೇಕರಿಗೆ ಆಘಾತ ತಂದ ಸುದ್ದಿಯಾಗಿದೆ.

ಹಳೇಮನೆ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಕನಕದಾಸ ನಗರದಲ್ಲಿ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಬುಧವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

1949 ರಲ್ಲಿ ಚಿಕ್ಕನಾಯನಹಳ್ಳಿ ಸಮೀಪದ ಆಲಗೋಣ ಗ್ರಾಮದಲ್ಲಿ ಜನಿಸಿದ ಲಿಂಗದೇವರು ಅವರದು ಬಹುಮುಖ ಪ್ರತಿಭೆ. ಮೈಸೂರು ಮತ್ತು ಅಣ್ಣಾಮಲೈ ವಿವಿಗಳಲ್ಲಿ ವಿದ್ಯಾಭ್ಯಾಸ. ಪ್ರಮುಖವಾಗಿ ಅವರ ಅಧ್ಯಯನ ಮತ್ತು ಅಧ್ಯಾಪನ ಕ್ಷೇತ್ರ ಭಾಷಾ ಶಾಸ್ತ್ರ ಕೇಂದ್ರಿತವಾಗಿತ್ತು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ(CIIL)ದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+