ಗಂಡಸರಿಗೆ ಮೂರು ಕಾಚಾ ಸಾಕಂತೆ ಆದರೆ ಮಹಿಳೆಯರಿಗೆ ...

ನಮ್ಮ ಚಡ್ಡಿಯನ್ನು ತೊಳೆದುಕೊಂಡು ಮತ್ತೆ ಅದನ್ನೇ ಹಾಕಿಕೊಳ್ಳುತ್ತೇವೆ ಎಂದು ಒಂದಷ್ಟು ಮಂದಿ ಹೇಳಿದರೆ ಇನ್ನು ಕೆಲವರು ಬಹುತೇಕ ವೇಳೆ ಈಜು ಮೋಜಿನಲ್ಲಿ ಕಾಲಕಳೆದು ಹೋಗುವುದರಿಂದ ಚಡ್ಡಿ ಬದಲಿಸುವ ಪ್ರಮೇಯ ಬರುವುದಿಲ್ಲ ಎಂದು ಪ್ಯಾಲಿ ನಗೆ ಚಿಮ್ಮಿದ್ದಾರೆ. ಇನ್ನು ಕೆಲವು ಇದು 'ಅಂದರ್ ಕಿ ಬಾತ್ ಹೈ'. ಇದನ್ನೆಲ್ಲ ಬಹಿರಂಗಪಡಿಸಲಾಗದು ಎಂದು ಕೈ ಎತ್ತಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಮಾತನಾಡಿರುವ ಮಹಿಳೆಯರು ತಾವು ಹೊತ್ತೊಯ್ಯುವ ಬಟ್ಟೆಗಳಲ್ಲಿ ಶೇ. 60ರಷ್ಟನ್ನು ಮಾತ್ರ ಬಳಸುತ್ತಾರೆ. ಉಳಿದವನ್ನು ಹಾಗೇ ಜೋಪಾನವಾಗಿ ವಾಪಸ್ ತರುತ್ತಾರಂತೆ. ಏನೇ ಆಗಲಿ ಸೇಫ್ಟಿ ಸೈಡ್ ಗೆ ಇರಲೆಂದು ಅಷ್ಟೊಂದನ್ನು ಪ್ಯಾಕ್ ಮಾಡಿರುತ್ತಾರಂತೆ. ಆದರೆ ಪುರುಷ ಪುಂಗವರು ಹಾಗಲ್ಲ. ತಾವು ತೆಕೆದುಕೊಂಡು ಕನಿಷ್ಠ ಉಡುಪನ್ನು ಅಷ್ಟೂ ಬಳಸಿ ಬಿಸಾಕುತ್ತಾರಂತೆ.
ಇನ್ನೂ ಒಂದು ಕುತೂಹಲಕಾರಿ ಸಂಗತಿಯೆಂದರೆ ಬಹುತೇಕ ಮಹಿಳೆಯರು ತಾವು ಹೊತ್ತೊಯ್ದಿರುವುದು ಸಾಲದು ಎಂಬಂತೆ ಮತ್ತೂ ಒಂದಷ್ಟನ್ನು ಖರೀದಿಸುತ್ತಾರಂತೆ. ಆದರೆ ಪುರುಷರು ಅದರ ಗೊಡವೆಯೇ ಬೇಡ ಎಂದು ತೆಪ್ಪಗಿರುತ್ತಾರಂತೆ!












Click it and Unblock the Notifications