ಒಲಂಪಿಕ್ಸ್ ನೆಪದಲ್ಲಿ ಲಂಡನ್ನಿನಲ್ಲಿ ಮಾದಕ ದ್ರವ್ಯ, ವೇಶ್ಯೆಯರ ಕಾರುಬಾರು

ಈಗಾಗಲೇ ಪೂರ್ವ ಲಂಡನ್ನಿನ ಸ್ಟ್ರಾಟ್ ಫೋರ್ಡ್ ನಲ್ಲಿ ವಿಶ್ವದ ಅತಿ ಭಯಾನಕ ಮಾಫಿಯಾ ಗ್ಯಾಂಗ್ ಅಂಗಡಿ ತೆರೆದಿಟ್ಟುಕೊಂಡು ಕುಳಿತಿವೆ. ಒಲಂಪಿಕ್ಸ್ ನೆಪದಲ್ಲಿ ರಾಜಧಾನಿಗೆ ಲಕ್ಷಾಂತರ ಜನ ಬಂದು ಹೋಗುವುದರಿಂದ ಇಂತಹ ವ್ಯವಸ್ಥೆಯನ್ನು ಸ್ಥಾಪಿಸಲು ರಷ್ಯಾ ಡ್ರಗ್ಸ್ ಕುಳಗಳು ಜಾಲ ಬೀಸಿವೆ. ಲಂಡನ್ ನಲ್ಲಿಯೂ ಇವರಿಗೆ ನೆರವಾಗಲು ಅನೇಕ ಸಮಾಜಘಾತುಕ ಶಕ್ತಿಗಳು ನೆಲೆಸಿವೆ.
'ಮಾದಕ ದ್ರವ್ಯ ಮತ್ತು ಮೋಹಕ ವೇಶ್ಯೆಯರು ಕ್ರಿಮಿನಲ್ ಗ್ಯಾಂಗ್ ಗಳಿಗೆ ಖಂಡಿತ ದುಡ್ಡು ತರುವಂತಹುವು. ಇವರು ಆತ್ಮಾಹುತಿ ಉಗ್ರರಿಗಿಂತ ಭಿನ್ನವಾಗಿರುವ ಭಯೋತ್ಪಾದಕರು. ಇವರಿಗೂ ಅಮಾಯಕರೇ ಗುರಿಯಾಗುತ್ತಾರೆ.
'ಕ್ರೀಡಾಕೂಟದ ವೇಳೆ ಬ್ರಿಟಿಷರೂ ಸೇರಿದಂತೆ ಅನೇಕ ವಿದೇಶಿಯರು ಕ್ಲಬ್, ಲ್ಯಾಪ್ ಡ್ಯಾನ್ಸ್ ಬಾರ್ ಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿ ವೊಡ್ಕಾ, ಮಾದಕ ದ್ರವ್ಯಕ್ಕೆ ಕೊರತೆ ಇರದು. ಇದರಿಂದ ಅಂತಿಮವಾಗಿ ಜನ ಮಾಫಿಯಾದವರನ್ನು ಪ್ರೋತ್ಸಾಹಿಸಿದಂತಾಗುತ್ತದೆ.ಆದರೆ ಈ ಬಗ್ಗೆ ನಾವು ನಿಗಾ ವಹಿಸಿದ್ದೇವೆ' ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಹೇಳಿದ್ದಾರೆ.












Click it and Unblock the Notifications