ಕರ್ನಾಟಕದ ಗ್ರಾಮಗಳ ನೀರು ಕುಡಿಯಲು ಯೋಗ್ಯವೇ?

ಕರ್ನಾಟಕದ ನೀರು ಕುಡಿಯಲು ಯೋಗ್ಯವೇ?
ಬೆಂಗಳೂರು, ಜೂನ್ 6: ರಾಜ್ಯದ ಗ್ರಾಮೀಣ ಪ್ರದೇಶಕ್ಕೆ ಪೂರೈಸಲಾಗುತ್ತಿರುವ ನೀರಿನಲ್ಲಿ ರಾಸಾಯನಿಕ ಅಂಶಗಳು ಅತ್ಯಧಿಕವಾಗಿರುವುದು ಕಂಡು ಬಂದಿದೆ. ಗ್ರಾಮೀಣ ನೀರು ಪೂರೈಕೆ ಯೋಜನೆಯಡಿ ಪೂರೈಸಲಾಗಿರುವ ನೀರುಗಳಲ್ಲಿ ನೈಟ್ರೆಟ್, ಫ್ಲೋರಿಡ್ ಮತ್ತು ಕ್ಲೋರಿನ್ ಅತ್ಯಧಿಕ ಪ್ರಮಾಣದಲ್ಲಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಕರ್ನಾಟಕ ಗ್ರಾಮೀಣ ಜಲ ಪೂರೈಕೆ ಮತ್ತು ಸ್ವಚ್ಛತಾ ಮಂಡಳಿ(ಕೆಆರ್ ಡಬ್ಲ್ಯುಎಸ್ಎಸ್ಎ)ಯ ಎಂಜಿನಿಯರಿಂಗ್ ವಿಭಾಗ ಅಧ್ಯಯನ ನಡೆಸಿದೆ. ವಿವಿಧ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಸುಮಾರು 1,64,971 ನೀರಿನ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ.

ಮಂಡಳಿಯು ಸುಮಾರು 1,56,564 ನೀರಿನ ಮೂಲಗಳನ್ನು ಪರೀಕ್ಷಿಸಿದೆ. ಅದರಲ್ಲಿ ಸುಮಾರು 29,426 ಕಡೆಯಿಂದ ಪರೀಕ್ಷಿಸಿದ ನೀರುಗಳಲ್ಲಿ ನೈಟ್ರೈಟ್, ಫ್ಲೋರಿಡ್ ಮತ್ತು ಕ್ಲೋರೈಡ್ ಅಂಶಗಳು ಪತ್ತೆಯಾಗಿವೆ.

ಇದರಲ್ಲಿ ಸುಮಾರು 7,450 ಸ್ಥಳದ ನೀರುಗಳಲ್ಲಿ ಅತ್ಯಧಿಕ ಪ್ರಮಾಣದ ನೈಟ್ರೆಟ್ ಅಂಶಗಳು ಇರುವುದಾಗಿ ಅಧ್ಯಯನ ಹೇಳಿದೆ. 1,549 ಕಡೆಯ ನೀರಿನಲ್ಲಿ ಪಿಎಚ್, 776 ಭಾಗದ ನೀರಿನಲ್ಲಿ ಕ್ಲೋರೈಡ್, 2,239 ನೀರುಗಳಲ್ಲಿ ಫ್ಲೂರೈಡ್, 3,106 ಕಡೆಯ ನೀರುಗಳಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣಾಂಶಗಳು ಕಂಡು ಬಂದಿವೆ.

ಈ ಕುರಿತು ಕ್ರಮಕೈಗೊಳ್ಳಲು ಸುಮಾರು 1,400 ಕೋಟಿ ರು.ವಿನ ಯೋಜನೆಯ ಪ್ರಸ್ತಾಪ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೆಆರ್ ಡಬ್ಲ್ಯುಎಸ್ಎಸ್ಎ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+