'ಡಬಲ್ ಏಜೆಂಟ್' ಹೆಡ್ಲಿ ಕಾಶ್ಮೀರಿ ಬಗ್ಗೆ ಮಾಹಿತಿ ನೀಡಿದನೇ?
ಚಿಕಾಗೊ,
ಜೂನ್ 6: ಅಮೆರಿಕದ ಡ್ರೋನ್ ದಾಳಿಯಲ್ಲಿ ಇಲಿಯಾಸ್ ಕಾಶ್ಮೀರಿ ಹಾಗೂ ತಾಲಿಬಾನ್ ಕಮಾಂಡರ್ ಅಮೀರ್ ಹಂಸ ಹತರಾಗಿದ್ದಾರೆ. ಇದರಿಂದ ಅಲ್ ಖೈದಾ ನಾಯಕರ ಅಡಗುದಾಣಗಳ ಬಗ್ಗೆ ಮುಂಬೈ ದಾಳಿ ಆರೋಪಿ, ಎಫ್ ಬಿಐ ಡಬಲ್ ಏಜೆಂಟ್ ಡೇವಿಡ್ ಕೊಲಮನ್ ಹೆಡ್ಲಿ ಮಾಹಿತಿ ನೀಡಿರುವ ಸಾಧ್ಯತೆಗಳನ್ನು ಪುಷ್ಟೀಕರಿಸಿದೆ. id="toptextpromo">ಐಎಸ್‌ಐ
ಜತೆ ಇಲಿಯಾಸ್ ಕಾಶ್ಮೀರಿ ನಿಕಟ ಸಂಪರ್ಕ ಹೊಂದಿದ್ದು, ಅವನ ಬಗ್ಗೆ ಪಾಕ್ ಬೇಹುಗಾರಿಕೆ ಸಂಸ್ಥೆ ಯಾವುದೇ ಮಾಹಿತಿಯನ್ನು ಅಮೆರಿಕಕ್ಕೆ ನೀಡುವುದು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಐಎಸ್‌ಐ ಜತೆ ಸಂಪರ್ಕವಿದ್ದ ಹೆಡ್ಲಿಯೇ ಆತನ ಬಗ್ಗೆ ಅಮೆರಿಕನ್ ಬೇಹುಗಾರಿಕೆ ಸಂಸ್ಥೆಗೆ ಮಾಹಿತಿ ನೀಡಿರುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>2009ರಲ್ಲಿ
ಅಬ್ದುರ್ ರೆಹಮಾನ್ ಹಷೀಂ ಸಯ್ಯದ್ ಜತೆ ಕಾಶ್ಮೀರಿಯನ್ನು ಭೇಟಿಯಾಗಿದ್ದ ಹೆಡ್ಲಿ ಕೊಪೆನ್‌ಹೆಗನ್‌ನಲ್ಲಿ ನಡೆಸಿದ್ದ ಸ್ಥಳ ಪರಿಶೀಲನೆಯ ವೀಡಿಯೋ ದೃಶ್ಯಾವಳಿಯ ಬಗ್ಗೆ ಚರ್ಚೆ ನಡೆಸಿದ್ದ. ಅದೇ ವರ್ಷ ವಜೀರಿಸ್ಥಾನದಲ್ಲಿ ಹೆಡ್ಲಿ ಹಾಗೂ ಪಾಶಾ ಮತ್ತೂಮ್ಮೆ ಕಾಶ್ಮೀರಿಯನ್ನು ಭೇಟಿಯಾಗಿದ್ದರು ಎಂದು ವರದಿಗಳು ಹೇಳಿವೆ.











Click it and Unblock the Notifications