ರಾಣಿ ಚೆನ್ನಮ್ಮ ವಿವಿ ವೆಬ್‌ಸೈಟ್ ಗೆ ಚಾಲನೆ
ಬೆಳಗಾವಿ,
ಜೂನ್ 5: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ತನ್ನದೇ ಆದ ಹೊಸ ವೈಬ್‌ಸೈಟ್ www.rcub.ac.in ಅನ್ನು ಪ್ರಾರಂಭಿಸಿದೆ. ಇದರಲ್ಲಿ ವಿವಿ ಕುರಿತಾದ ಶೈಕ್ಷಣಿಕ ಮಾಹಿತಿ, ವಿವಿಧ ಕೋರ್ಸ್‌ಗಳು, ಪ್ರವೇಶ ಪ್ರಕ್ರಿಯೆ ಮುಂತಾದ ವಿಷಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ.ಆರ್. ಅನಂಥನ್ ತಿಳಿಸಿದ್ದಾರೆ. id="toptextpromo">ವಿಶ್ವವಿದ್ಯಾಲಯ
ವ್ಯಾಪ್ತಿಯ ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು, ಪರೀಕ್ಷಾ ವೇಳಾಪಟ್ಟಿ, ಪಠ್ಯಕ್ರಮ ಮುಂತಾದ ಮಾಹಿತಿಗಳಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ವೆಬ್‌ಸೈಟ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. id='are-slot-1' class='oiad oi-axt oiadv'> id='top-searched-articles'>ವಿಶ್ವವಿದ್ಯಾಲಯದ
ಅಧೀನದಲ್ಲಿರುವ ಎಲ್ಲ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜಿನ ಇ-ಮೇಲ್ ವಿಳಾಸವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡಬೇಕು ಎಂದೂ ಅವರು ಕೋರಿದ್ದಾರೆ. ಕರ್ನಾಟಕ ಯೂನಿವರ್ಸಿಟಿ ಪಿಜಿ ಸೆಂಟರ್ ಅನ್ನು 2010ರಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟ ಜಿಲ್ಲೆಗಳು ಈ ವಿವಿಯ ವ್ಯಾಪ್ತಿಗೆ ಬರುತ್ತವೆ.











Click it and Unblock the Notifications