ಮಹಾಗೋಡೆಯಲ್ಲಿ ಬಿರುಕು: ಚೀನಾದಲ್ಲಿ ಹೆಚ್ಚುತ್ತಿದೆ ವಿಚ್ಛೇದನ
ಬೀಜಿಂಗ್,
ಜೂನ್ 5: ಚೀನಾ ಜನಸಂಖ್ಯೆ100 ಕೋಟಿ ದಾಟಿ ಎಷ್ಟೋ ದಿನಗಳಾದವು. ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಹಪಾಹಪಿಗೆ ಬಿದ್ದ ಚೀನಾ ಚಿಣ್ಣರು ಹದಿಹರೆಯದಲ್ಲೇ ಮದುವೆ ಮಾಡ್ಕೊಂಡು ಸಂಸಾರದ ಗುಂಡಿಗೆ ಬಿದ್ದು ಒದ್ಲಾಡುತ್ತಿದ್ದಾರೆ. ಅವರಿಗೆ ಈಗೀಗ ಸಂಸಾರವೆಂದ್ರೆ ಸಾಕಾಗಿ ಬಿಟ್ಟಿದೆಯಂತೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಡೈವೋರ್ಸ್ ಹೆಚ್ಚಾಗಿದೆಯಂತೆ. id="toptextpromo">ಚೀನಾ,
ಇದೀಗ ವಿಚ್ಚೇದನದಲ್ಲಿಯೂ (ಡೈವೋರ್ಸ್) ವಿಶ್ವದ ನಂ.1 ಎಂಬ ಕುಖ್ಯಾತಿ ಗಳಿಸಿದೆ. ಅಲ್ಲಿ ಈಗ ಪ್ರತಿದಿನ 5000 ದಂಪತಿಗಳು ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರಂತೆ. ಕಳೆದ 4 ತಿಂಗಳ ಅವಧಿಯಲ್ಲಿ ಚೀನಾದ ನಾಗರಿಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು 4,65,000 ಜನರಿಗೆ ವಿಚ್ಚೇದನ ಕೊಡಿಸಿದ್ದಾರಂತೆ. id='are-slot-1' class='oiad oi-axt oiadv'> id='top-searched-articles'>ಅಂದರೆ
ಸರಾಸರಿ ದಿನಕ್ಕೆ 5000 ಡೈವೋರ್ಸ್ ಕೇಸ್ ಖಲಾಸ್. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿಚ್ಚೇದನದ ಪ್ರಮಾಣ ಶೇ.17ರಷ್ಟು ಹೆಚ್ಚಿದೆಯಂತೆ. ಪತಿ- ಪತ್ನಿಯರ ನಡುವೆ ಸಮನ್ವಯದ ಕೊರತೆ, ಹೆಚ್ಚುತ್ತಿರುವ ಅಕ್ರಮ ಸಂಬಂಧ ವಿವಾಹ ಸಂಬಂಧ ಮುರಿದು ಬೀಳಲು ಪ್ರಮುಖ ಕಾರಣವಂತೆ. ಇದಲ್ಲದೆ ಚೀನಾದಲ್ಲಿ ಪುರುಷರು ಮತ್ತು ಮಹಿಳೆಯರು ಒಂಟಿ ಜೀವನ ನಡೆಸುವುದರತ್ತ ವಾಲುತ್ತಿರುವುದೂ ವಿಚ್ಚೇದನ ಪ್ರಮಾಣ ಹೆಚ್ಚಲು ಕಾರಣವಂತೆ.











Click it and Unblock the Notifications