ತಿರುಪತಿಯಲ್ಲಿ ಈಗ ಊಟದ ಜತೆ ರೋಟಿ
ಹೈದರಾಬಾದ್,
ಜೂನ್ 3: ತಿರುಮಲದ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡಲಾಗುವ ಉಚಿತ ಭೋಜನದಲ್ಲಿ ಜುಲೈನಿಂದ ರೋಟಿ ಸೇರ್ಪಡೆಯಾಗಲಿದೆ. ಉತ್ತರ ಭಾರತದ ಭಕ್ತರನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ವ್ಯವಸ್ಥೆ ಮಾಡಿದೆ. id="toptextpromo">ಪಂಜಾಬ್‌ನ
ಅಮೃತಸರದಲ್ಲಿ ಭಕ್ತರಿಗೆ ರೋಟಿ ನೀಡುವ ವ್ಯವಸ್ಥೆಯನ್ನು ನೋಡಿಕೊಂಡು ಬಂದಿರುವ ಅಧಿಕಾರಿಗಳು ಇಲ್ಲೂ ಆ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಗಂಟೆಗೆ 2000 ರೋಟಿ ಸುಡುವ ಯಂತ್ರವೊಂದನ್ನು ಕೊಯಮತ್ತೂರಿನಿಂದ ತರಲಾಗಿದೆ. ಈಗಿರುವ ಭೋಜನಾಲಯದ ಜೊತೆಗೆ ಹೊಸತಾಗಿ ನಿರ್ಮಿಸಲಾಗಿರುವ, ಏಕಕಾಲಕ್ಕೆ 4000 ಮಂದಿ ಊಟ ಮಾಡುವ ಭೋಜನಾಲಯವನ್ನು ಜುಲೈ 7ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭಕ್ತರ
ದೇಣಿಗೆಯಿಂದ ನಡೆಯುವ ಇಲ್ಲಿನ ಬೃಹತ್ ಅನ್ನದಾನ ವ್ಯವಸ್ಥೆಗೆ ಸಂಗ್ರಹಿಸಲಾದ ನಿಧಿ 200 ಕೋಟಿ ರೂ. ತಲುಪಿದೆ. ಅನಾಮಿಕ ಉದ್ಯಮಿಯೊಬ್ಬರು 20 ಕೋಟಿ ರೂ. ನೀಡಿದ್ದು, ಆ ಹಣದಲ್ಲೇ ನೂತನ ಅನ್ನದಾನ ಮಂದಿರ ನಿರ್ಮಿಸಲಾಗಿದೆ.











Click it and Unblock the Notifications