ಹಲೋ 108: ಆರೋಗ್ಯ ಕವಚ ಸಿಬ್ಬಂದಿಗಳಿಗಿದೆ 108 ಸಮಸ್ಯೆ

Arogya Kavacha
ಶಿವಮೊಗ್ಗ, ಜೂನ್ 3: ಆರೋಗ್ಯ ಕವಚ 108 ಮೂಲಕ ಇತರರ ಪ್ರಾಣವುಳಿಸುವ ಅಂಬ್ಯುಲೆನ್ಸ್ ಚಾಲಕರು ಮತ್ತು ನರ್ಸಿಂಗ್ ಸಿಬ್ಬಂದಿಗಳಿಗೆ ಉದ್ಯೋಗದಲ್ಲಿ ಅಭದ್ರತೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಕವಚ 108 ಉದ್ಯೋಗಿಗಳ ಒಕ್ಕೂಟ ಹೇಳಿದೆ.

ಆರೋಗ್ಯ ಕವಚ ನೌಕರರ ಸಂಘ ನಡೆಸಿದ ಸಮಾವೇಶದಲ್ಲಿ ಭಾಗವಹಿಸಿರುವ ಕಾರಣದಿಂದ ಕಳೆದ 20 ದಿನಗಳಲ್ಲಿ ಸುಮಾರು 18 ಉದ್ಯೋಗಿಗಳನ್ನು ಡಿಸ್ ಮಿಸ್ ಮಾಡಲಾಗಿದೆ ಎಂದು ದಿ ಹಿಂದು ವರದಿ ಮಾಡಿದೆ.

ಸಿಬ್ಬಂದಿಗಳಿಗೆ 108 ಸಮಸ್ಯೆ: ಆರೋಗ್ಯ ಕವಚ 108 ನೌಕರರ ಸಂಘದ ಪ್ರಕಾರ ಅಂಬ್ಯುಲೆನ್ಸ್ ಚಾಲಕರು ಮತ್ತು ನರ್ಸಿಂಗ್ ಸಿಬ್ಬಂದಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಡಿಮೆ ವೇತನ, ರಜೆಯ ಕೊರತೆ, ಚಾಲಕರನ್ನು ಅವರ ಜಿಲ್ಲೆಗಳಿಗೆ ನೇಮಕ ಮಾಡದಿರುವುದು ಇತ್ಯಾದಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು 108 ನೌಕರರ ಸಂಘ ಹೇಳುತ್ತಿದೆ.

ಇಷ್ಟೇ ಅಲ್ಲದೇ ಮಹಿಳಾ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ನೀಡದಿರುವುದು, ಕಾನೂನಿಗೆ ವಿರುದ್ಧವಾಗಿ ರಾತ್ರಿ ಡ್ಯೂಟಿಗೆ ನಿಯೋಜಿಸುವುದು ಇತ್ಯಾದಿ ಸಮಸ್ಯೆಗಳನ್ನು ಆರೋಗ್ಯ ಕವಚ 108 ಸಂಘ ಮುಂದಿಟ್ಟಿದೆ.

108 ವಾಹನಕ್ಕೆ ಚಿಕ್ಕ ಅಪಘಾತವಾದರೆ ಚಾಲಕರು ಹೊಣೆಯಾಗುತ್ತಾರೆ. ಪ್ರತಿಲೀಟರ್ ಗೆ 15 ಕಿ,ಮೀ. ಮೈಲೇಜ್ ಮಿತಿ ನೀಡಲಾಗಿದೆ. ಇಂತಹ ಹಲವು ನಿಬಂಧನೆಗಳಿಂದ ಚಾಲಕರು ಒತ್ತಡಕ್ಕೀಡಾಗಿದ್ದಾರೆ. ಹೀಗಾಗಿ ಚಾಲಕರ ಸಮಸ್ಯೆ ಬಗೆಹರಿಸಲು 108 ನೌಕರರ ಸಂಘ ಸ್ಥಾಪಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ರಘುನಾಥ್ ಹೇಳುತ್ತಾರೆ.

ಆದರೆ ಆರೋಗ್ಯ ಕವಚ 108 ಒಕ್ಕೂಟದ ಆರೋಪವನ್ನು ಜಿವಿಕೆ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಅಲ್ಲಗೆಳೆದಿದ್ದಾರೆ. 108 ನೌಕರರ ಸಂಘ ರಿಜಿಸ್ಟರ್ ಆಗಿರೋ ಸಂಘವಲ್ಲ ಎಂದು ಅವರು ಹೇಳುತ್ತಾರೆ.

ರಾಜ್ಯದ 108 ಸೇವೆಯ ಉಸ್ತುವಾರಿ ಜಿವಿಕೆ ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ ನೋಡಿಕೊಳ್ಳುತ್ತಿದೆ. ತುರ್ತು ವೈದ್ಯಕೀಯ ಸೇವೆಗಾಗಿ ರಾಜ್ಯದಲ್ಲಿ ಸುಮಾರು 2 ಸಾವಿರ ಚಾಲಕರು ಮತ್ತು ನರ್ಸಿಂಗ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+