ಮಹಾ ಕುಡಿತಕ್ಕೆ ವಯೋಮಿತಿ (25 ವರ್ಷ) ಕಡಿವಾಣ
ಮುಂಬೈ,
ಜೂನ್ 2: ಮದುವೆ, ಮತ ಚಲಾವಣೆ ಬೇಗನೆ ಮಾಡಬಹುದು. ಆದರೆ ಗುಂಡು !? ವೆಲ್. ಮಹಾರಾಷ್ಟ್ರದಲ್ಲಿ ಬುಧವಾರ 'ಮಧ್ಯ'ರಾತ್ರಿಯಿಂದ ಜಾರಿಗೆ ಬಂದಿರುವ ಶಿಷ್ಟಾಚಾರದಂತೆ 25 ವರ್ಷದೊಳಗಿನವರು ಮದ್ಯ ಖರೀದಿ ಅಥವಾ ಸೇವನೆ ಮಾಡುವಂತಿಲ್ಲ. ದೆಹಲಿಯಲ್ಲೂ ಮದ್ಯ ಸೇವನೆಗೆ ಕನಿಷ್ಠ ವಯಸ್ಸು 25. ಈ ಮಿತಿ ಪ್ರಪಂಚದಲ್ಲೇ ಅತಿ ಹೆಚ್ಚು ಎನ್ನಲಾಗಿದೆ. id="toptextpromo">ರಾಜ್ಯ
ಸರ್ಕಾರ ಮದ್ಯಪಾನಕ್ಕೆ ಸಂಬಂಧಿಸಿದ ಕಾನೂನನ್ನು ಬಿಗಿಗೊಳಿಸಿದ್ದು, ಮದ್ಯ ಸೇವನೆ ಕನಿಷ್ಠ ವಯಸ್ಸನ್ನು 25 ವರ್ಷಕ್ಕೆ ನಿಗದಿಗೊಳಿಸಿದೆ. ಆದರೆ 21 ವರ್ಷದವರು ಬಿಯರ್ ಕುಡಿಯಬಹುದು. ಇಲ್ಲಿಯವರೆಗೆ ಎಲ್ಲ ರೀತಿಯ ಮದ್ಯ ಸೇವನೆಗೆ ಕನಿಷ್ಠ ವಯಸ್ಸು 21 ಇತ್ತು. id='are-slot-1' class='oiad oi-axt oiadv'> id='top-searched-articles'>ಬುಧವಾರ
ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಮದ್ಯ ಹಂಚಿಕೆ ನಿಷೇಧಿಸುವುದೂ ಇದರಲ್ಲಿ ಸೇರಿದೆ. 25 ವರ್ಷದೊಳಗಿನವರು ಮದ್ಯ ಕುಡಿದರೆ ಅವರಿಗೆ ಮತ್ತು ಮದ್ಯ ಮಾರಾಟ ಮಾಡಿದ ಬಾರ್ ಅಥವಾ ವೈನ್‌ಶಾಪ್ ಗೆ ದಂಡ ವಿಧಿಸಲಾಗುತ್ತದೆ.











Click it and Unblock the Notifications