ಅಂತೂ ನಮ್ಮ ಮಂತ್ರಿವರ್ಯರು 10+2 ಪಾಸ್ ಆದ್ರು

ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರದ ಸಚಿವ ರಮೇಶ್ ಪ್ರಸಕ್ತ ವರ್ಷದ ಹೈಯರ್ ಸೆಕೆಂಡರಿ(10+2) ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸೋಮವಾರ ರಾಜ್ಯದ ಹೈಯರ್ ಸೆಕಂಡರಿ ಶಿಕ್ಷಣ ಪ್ರಾಧಿಕಾರ ಪ್ರಕಟಿಸಿದ ಫಲಿತಾಂಶಕ್ಕಾಗಿ ಕೂದು ಕುಳಿತಿದ್ದ ರಮೇಶ್ ಗೆ ಸಿಹಿ ಸುದ್ದಿ ಸಿಕ್ಕಿದೆ. ಕಲಾ ವಿಭಾಗದಲ್ಲಿ 600 ಅಂಕಗಳಲ್ಲಿ 376 ಅಂಕಗಳನ್ನು ಗಳಿಸಿ ಸಚಿವರು ಪಾಸಾಗಿದ್ದಾರೆ.
ಈ ಫಲಿತಾಂಶದಿಂದ ಖುಷಿಗೊಂಡಿರುವ ಸಚಿವ ರಮೇಶ್, "ನನ್ನ ಬ್ಯುಸಿ ಕಾರ್ಯಕ್ರಮಗಳ ನಡುವೆಯೂ ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆಯಿತ್ತು. ಇನ್ನು ಮುಂದೆ ಕೂಡಾ ಶಿಕ್ಷಣ ಮುಂದುವರೆಸಬೇಕು ಎಂಬ ಇಚ್ಛೆಯಿದೆ ಎಂದಿದ್ದಾರೆ.
ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ನವರಂಗ್ ಪುರ ಜಿಲ್ಲೆಯ ಚಂದಹಂಡಿ ಬ್ಲಾಕ್ ಗೆ ಸೇರಿದ ಪನಬೆಡ ಮಹಾವಿದ್ಯಾಲಯದಲ್ಲಿ ಸಚಿವ ರಮೇಶ್ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದು ಬಜೆಟ್ ಸೆಷನ್ ಗೆ ತೆರಳಿದ್ದ ರಮೇಶ್ ಗೆ ಫ್ಲಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗುವ ನಿರೀಕ್ಷೆ ಏನೂ ಇರಲಿಲ್ಲವಂತೆ, ಆದರೆ, ಉತ್ತಮ ಅಂಕದೊಡನೆ ಪಾಸಾಗುವ ನಂಬಿಕೆಯಿತ್ತು ಎನ್ನುತ್ತಾರೆ ಸಚಿವ ರಮೇಶ್. ಉನ್ನತ ವ್ಯಾಸಂಗ ಮಾಡಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಂದ ಭೇಷ್ ಎನಿಸಿಕೊಳ್ಳಲು ರಮೇಶ್ ಸಿದ್ಧತೆ ನಡೆಸಿದ್ದಾರಂತೆ.












Click it and Unblock the Notifications