ಈಜಿಪ್ಟ್ ಮಹಿಳಾ ಪ್ರತಿಭಟನಕಾರರ ಕನ್ಯತ್ವ ಪರೀಕ್ಷೆ

"ಆ ಮಹಿಳೆಯರು ನಮ್ಮ ನಿಮ್ಮ ಹೆಣ್ಣು ಮಕ್ಕಳಂತೆ ಅಲ್ಲ. ಅವರು ತಹ್ರಿರ್ ಸ್ಕ್ವಾರ್ ನಲ್ಲಿ ಪುರುಷರೊಂದಿಗೆ ಟೆಂಟ್ ಗಳಲ್ಲಿ ಮಲಗಿದ್ದಾರೆ. ಅಲ್ಲಿ ಹೆಚ್ಚಿನವರು ಡ್ರಗ್ಸ್ ಬಳಸಿದ್ದಾರೆ ಎಂಬುದು ನಮಗೆ ತಿಳಿದುಬಂದಿದೆ" ಎಂದು ಸಿಎನ್ಎನ್ ಗೆ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.
"ಈಜಿಪ್ಟ್ ಆಡಳಿತದಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ಯುವತಿಯರು ಮುಂದೆ ಹೇಳಬಾರದಲ್ವ. ಅದಕ್ಕೆ ಅವರ ಕನ್ಯತ್ವ ಪರೀಕ್ಷೆ ಮಾಡಿದ್ದೇವೆ" ಎಂದು ತಮ್ಮ ಕಾರ್ಯವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
"ಬಂಧನದಲ್ಲಿರುವ ಮಹಿಳಾ ಪ್ರತಿಭಟನಕಾರರಿಗೆ ಸಾಕಷ್ಟು ಚಿತ್ರ ಹಿಂಸೆ ನೀಡಲಾಗಿದೆ. ಅವರನ್ನು ಕನ್ಯತ್ವ ಪರೀಕ್ಷೆ ಮಾಡಿಸಲು ಒತ್ತಾಯ ಮಾಡಿದೆ" ಎಂದು ಈ ಹಿಂದೆ ವರದಿಯೊಂದು ಹೇಳಿತ್ತು. ಆದರೆ ಇದನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ನಿರಾಕರಿಸಿದ್ದರು.
ಆದರೆ ಆ ಯುವತಿಯರೇ ಇದನ್ನು ಬಹಿರಂಗಪಡಿಸಿದ ನಂತರ ಮಿಲಿಟರಿ ಅಧಿಕಾರಿಗಳು ಕನ್ಯತ್ವ ಪರೀಕ್ಷೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. "ಪುರುಷ ಡಾಕ್ಟರ್ ಗಳು, ಹಲವು ಸೈನಿಕರ ಮುಂದೆ ನಮ್ಮ ಪರೀಕ್ಷೆ ಮಾಡಲಾಯಿತು. ನಮ್ಮ ವಿರೋಧ ಅರಣ್ಯರೋಧನವಾಯಿತು" ಎಂದು ಸಲ್ವ ಹುಸೈನಿ ಎಂಬಾಕೆ ತಿಳಿಸಿದ್ದಾಳೆ.












Click it and Unblock the Notifications