ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜರ್ಮನ್ ಭಾಷೆ ಕಲಿಯಿರಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜರ್ಮನ್ ಭಾಷೆ ಕಲಿಸಲು ಮೊಯಿಲಿಂಗ್ ಇನ್ಶೂಟ್ಯೂಟ್ ಆಫ್ ಜರ್ಮನ್ ಲ್ಯಾಗ್ವೇಜ್ ಒಪ್ಪಿಗೆ ನೀಡಿದೆ. ಕನಿಷ್ಠ ಎಸ್ಎಸ್ಎಲ್ಸಿ ಪಾಸಾಗಿರುವವರು ಈ ಕೋರ್ಸ್ ಗೆ ಸೇರಬಹುದು.
ಜರ್ಮನಿಯ ಸಾಮಾನ್ಯ ನಿಘಂಟು, ವ್ಯಾಕರಣ, ಜರ್ಮನ್ ಭಾಷೆ ಓದುವುದು, ಅರ್ಥಮಾಡಿಕೊಳ್ಳುವುದು, ಸಾಮಾನ್ಯ ವಾಕ್ಯಗಳನ್ನು ಬರೆಯುವುದು ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತಂತೆ.
"ಜರ್ಮನಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಭಾಷೆಯ ಅರಿವು ಅಗತ್ಯ. ಈ ಕೋರ್ಸಿಗೆ ಯಾರು ಬೇಕಾದರೂ ಸೇರಬಹುದು. ಸಂಜೆ ತರಗತಿಗಳನ್ನು ಆಯೋಜಿಸಲಾಗುವುದು. ಜರ್ಮನಿ ವಿಸಾಕ್ಕೆ ಅರ್ಜಿ ಸಲ್ಲಿಸುವರೂ ಕೂಡ ಅಲ್ಲಿನ ಭಾಷೆ ತಿಳಿದಿರಬೇಕು. ಹೀಗಾಗಿ ಜರ್ಮನ್ ಕಲಿಕೆ ಅಗತ್ಯ" ಎಂದು ಸಂಸ್ಥೆಯ ಪ್ರಿನ್ಸಿಪಾಲ್ ಡಿ ಧನರಾಜ್ ಹೇಳುತ್ತಾರೆ.












Click it and Unblock the Notifications