ಮಂಡಗದ್ದೆ ಬಳಿ ಸಾಲು ಸಾಲು ಮೊಸಳೆ ಮರಿಗಳ ಜನನ

ಸುಮಾರು ಎಂಟು ವರ್ಷ ವಯಸ್ಸಿನ ಎಂಟು ಅಡಿ ಉದ್ದದ ಮೊಸಳೆಯು ತುಂಗಾ ನದಿ ತೀರದಲ್ಲಿ ಅಂದಾಜು ಮೂರು ತಿಂಗಳ ಹಿಂದೆ ಭೂಮಿಯಲ್ಲಿ ಗೂಡು ಮಾಡಿ 38 ಮೊಟ್ಟೆಗಳನ್ನು ಹಾಕಿ ಸುರಕ್ಷಿತವಾಗಿ ಇಟ್ಟಿತ್ತು. ಅವುಗಳಲ್ಲಿ 35 ಮೊಸಳೆ ಮರಿಗಳು ಬೆಳಗಿನ ಜಾವ ಮೊಟ್ಟೆ ಒಡೆದು ಹೊರಬಂದಿವೆ.
ತಾಯಿ ಮೊಸಳೆಯು ಮೂರು ಕಡೆ ಮಣ್ಣು ಅಗೆದು ಒಂದೆಡೆ ಮಾತ್ರ ಮೊಟ್ಟೆಗಳನ್ನು ಹೂತು ಇಟ್ಟಿತ್ತು. ಶನಿವಾರ ರಾತ್ರಿವರೆಗೂ ತಾಯಿ ಮೊಸಳೆ ಸ್ಥಳದಲ್ಲಿಯೇ ಮೊಟ್ಟೆಗಳನ್ನು ಕಾಯುತ್ತಿತ್ತು. ಭಾನುವಾರ ಬೆಳಗಿನ ಜಾವ ಮೀನು ಹಿಡಿಯಲು ಹೋದಾಗ, ಹತ್ತಾರು ಮರಿಗಳು ಮೊಟ್ಟೆ ಒಡೆದು ಚೀರುತ್ತಾ ಒಂದೊಂದಾಗಿ ಹೊರಬರುತ್ತಿರುವುದು ಕಂಡುಬಂತು ಎಂದು ಗ್ರಾಮಸ್ಥರು ಹೇಳಿದ್ದಾರೆ.
38 ಮೊಟ್ಟೆಗಳಲ್ಲಿ 35 ಮರಿಗಳಾಗಿ ಹೊರಬಂದಿವೆ. ಆ ಎಲ್ಲ ಮರಿಗಳೂ ಸುರಕ್ಷಿತವಾಗಿದ್ದು, ನದಿಗೆ ಸೇರಿವೆ. ಇನ್ನೂ ಮೂರು ಮೊಟ್ಟೆಗಳು ಹಾಗೇ ಇದ್ದು, ಸದ್ಯದಲ್ಲೇ ಇವು ಕೂಡ ಮರಿಗಳಾಗಲಿವೆ ಎಂದು ವಲಯ ಅರಣ್ಯಾಧಿಕಾರಿ ರಂಗನಾಥ್ ತಿಳಿಸಿದ್ದಾರೆ.












Click it and Unblock the Notifications