ಶಾಸಕರ ಹಾಸ್ಟೆಲಿನಿಂದ ಹಾರಿ ಎಂಎಲ್ಎ ಆತ್ಮಹತ್ಯೆ

ಮೂರನೇ ಮಹಡಿಯಿಂದ ಜಿಗಿದ ಶಾಸಕ ತಗಡಿನ ಶೆಡ್‌ನ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಖಾಸಿಂಗೆ 80 ವರ್ಷ ಪ್ರಾಯವಾಗಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಖಾಸಿಂ ಸಾಯುವ ಮೊದಲು ಪತ್ರ ಬರೆದಿಟ್ಟಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಗೆ 1977ರಲ್ಲಿ ಮೊದಲು ಗೆದ್ದು ಬಂದಿದ್ದ ಖಾಸಿಂ ಅನಂತರ 1991 ಮತ್ತು 2011ರಲ್ಲಿ ಚುನಾಯಿತರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕೈಗಾರಿಕೋದ್ಯಮ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಸೋಮವಾರ ನಡೆಯಲಿರುವ ಪಶ್ಚಿಮ ಬಂಗಾಳ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಖಾಸಿಂ ಇತರ ಶಾಸಕರೊಂದಿಗೆ ರಾಜಧಾನಿಗೆ ಆಗಮಿಸಿ ಶಾಸಕರ ಭವನದಲ್ಲಿದ್ದರು. ಖಾಸಿಂ ಸಾವಿನೊಂದಿಗೆ ವಿಧಾನಸಭೆಯಲ್ಲಿ ಸಿಪಿಎಂ ಶಾಸಕರ ಸಂಖ್ಯಾಬಲ 39ಕ್ಕೆ ಇಳಿದಿದೆ. ಎಡರಂಗ ಒಟ್ಟು 61 ಶಾಸಕರನ್ನು ಹೊಂದಿದೆ.












Click it and Unblock the Notifications