ಆಪರೇಷನ್ ಥಿಯೇಟರ್ ನೊಳಗೆ ಮದ್ಯ, ರೋಗಿ ಗೋವಿಂದ!

ಅದು ಜೆಜೆ ಆಸ್ಪತ್ರೆಯ ನರರೋಗ ಚಿಕಿತ್ಸಾ ವಿಭಾಗದ ಆಪರೇಷನ್ ಥಿಯೇಟರ್ (ಒಟಿ). ಅದನ್ನು ಮೊನ್ನೆ ಮಂಗಳವಾರ ಆಸ್ಪತ್ರೆಯ ಸಿಬ್ಬಂದಿ ನರೇಶ್ ಪಂಡಿತ್ ಸ್ವಚ್ಛಗೊಳಿಸುತ್ತಿದ್ದ. ಆಪರೇಷನ್ ಥಿಯೇಟರ್ ಗೆ ಹೊಂದಿಕೊಂಡಿರುವ ಸಣ್ಣ ರೂಂನಲ್ಲಿ ಆತನ ಕಣ್ಣಿಗೆ ಬಿದ್ದದ್ದು ಮದ್ಯದ ಬಾಟಲಿಗಳು ಮತ್ತು ಮದ್ಯದ ಬಾಟಲಿಯ ಮುಚ್ಚಳಗಳು.
ತಕ್ಷಣ ನರೇಶ್ ಈ ವಿಷಯವನ್ನು ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದ. ಇಷ್ಟು ಭದ್ರತೆಯಿರುವ ಮತ್ತು ಇಷ್ಟೊಂದು ಸೂಕ್ಷ್ಮ ಪ್ರದೇಶವಾದ ಆಪರೇಷನ್ ಥಿಯೇಟರ್ ನೊಳಗೆ ಮದ್ಯದ ಬಾಟಲಿಗಳನ್ನು ತಂದವರು ಯಾರು ಎಂದು ಎಲ್ಲರಿಗೂ ಅಚ್ಚರಿ.
ಆಸ್ಪತ್ರೆಯ ಸಿಬ್ಬಂದಿಗಳು ಮದ್ಯದ ಬಾಟಲಿಗಳನ್ನು ಒಳಗೆ ತಂದು ಕುಡಿಯುತ್ತಿದ್ದಾರೆಯೇ? ಅಥವಾ ಬೇರೆ ಯಾರು ಆಪರೇಷನ್ ಥಿಯೇಟರ್ ನ್ನೇ ಬಾರ್ ಆಗಿ ಪರಿವರ್ತಿಸಿರಬಹುದೇ? ಎಂಬುದರ ಕುರಿತು ತನಿಖೆ ಮಾಡುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
"ಪ್ರತಿಷ್ಠಿತ ಆಸ್ಪತ್ರೆಗೆ ಇದು ಮಸಿಬಳಿಯುವ ಪ್ರಯತ್ನ. ಇಂತಹ ಸೂಕ್ಷ್ಮ ಪ್ರದೇಶವಾದ ಅಪರೇಷನ್ ಥಿಯೇಟರ್ ನೊಳಗೆ ಮದ್ಯದ ಬಾಟಲಿ ತರುವುದು ಭದ್ರತಾ ವ್ಯಫಲ್ಯವೂ ಹೌದು" ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಆಸ್ಪತ್ರೆಯಲ್ಲಿ ಔಷಧಿ ಬಾಟಲ್ ಅಲ್ಲದೇ ಮದ್ಯದ ಬಾಟಲ್ ಗಳು ದೊರಕುವುದು ದೂರದ ಮುಂಬೈನಲ್ಲಿ ಮಾತ್ರವಲ್ಲ. ನಮ್ಮ ಬೆಂಗಳೂರಿನಲ್ಲೂ ಇಂಥ ಘಟನೆ ಬೆಳಕಿಗೆ ಬಂದು ಹೆಚ್ಚು ದಿನ ಆಗಿಲ್ಲ. ಮೊನ್ನೆ ಸಚಿವ ರಾಮದಾಸ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿದ್ದ ರಾಶಿ ರಾಶಿ ಮದ್ಯದ ಬಾಟಲಿಗಳನ್ನು ಕಂಡು ಬೆಕ್ಕಸ ಬೆರಗಾದರು.[ಓದಿ: ]












Click it and Unblock the Notifications