ನಕಲಿ ವೈದ್ಯರ ಹಾವಳಿ ಬೆಳಗಾವಿಯಲ್ಲಿ ಅತ್ಯಧಿಕ

ಸರಕಾರಿ ವೈದ್ಯರು ಗ್ರಾಮಾಂತರ ಭಾಗದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುವುದೇ ಇಂತಹ ನಕಲಿ ಶ್ಯಾಮರು ಉದ್ಭವವಾಗುವುದಕ್ಕೆ ಹೇತುವಾಗಿದೆ. ಆಶ್ಚರ್ಯದ ಸಂಗತಿಯೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರೋಬ್ಬರಿ ಅರ್ಧ ಲಕ್ಷ ಮಂದಿ ನಕಲಿ ವೈದ್ಯರಿದ್ದಾರೆ.
ಈ ಅಳಲೆಕಾಯಿ ಪಂಡಿತರು ಅಥವಾ ಅರೆಬರೆ ವೈದ್ಯರು ಎಸ್ಸೆಲ್ಸಿಯೋ, ಪಿಯುಸಿಯೋ ಓದಿರುತ್ತಾರೆ. ನಿಜವಾದ ವೈದ್ಯರ ಬಳಿ ನರ್ಸ್ ಆಗಿಯೋ ಅಥವಾ ಆಫೀಸ್ ಬಾಯ್ ಆಗಿಯೋ ಕೆಲಸ ಮಾಡಿ, ಅರೆಬರೆ ಜ್ಞಾನ ಸಂಪಾದಿಸುತ್ತಾರೆ ಅಲ್ಲಿಂದ ಮುಂದಕ್ಕೆ ಸ್ವಯಂ ವೈದ್ಯರಾಗಿ ರಂಗಕ್ಕೆ ಇಳಿಯುತ್ತಾರೆ. ಇಂತಹ ವೈದ್ಯರು ಪ್ರತಿ ಜಿಲ್ಲೆಯಲ್ಲಿ ನೂರಾರು ಮಂದಿ ಇದ್ದಾರೆ. ಗ್ರಾಮಾಂತರ ಭಾಗದಲ್ಲಿ ಇಂತಹವ ಹಾವಳಿ ಮತ್ತಷ್ಟು ಹೆಚ್ಚಾಗಿರುತ್ತದೆ.
ಬೆಳಗಾವಿಯಲ್ಲಿ ಸುಮಾರು ಮುನ್ನೂರು ಮಂದಿ ನಕಲಿ ವೈದ್ಯರಿದ್ದು, ಇಡೀ ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರನ್ನು ಹೊಂದಿರುವ ಜಿಲ್ಲೆ ಎಂಬ ಕುಖ್ಯಾತಿ ಗಳಿಸಿದೆ. ನಂತರದ ಸ್ಥಾನದಲ್ಲಿ ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳದ್ದಾಗಿದೆ ಎಂದು KAUPB ರಿಜಿಸ್ಟ್ರಾರ್ ಡಾ. ವೀರಭದ್ರಪ್ಪ ತಿಳಿಸಿದ್ದಾರೆ.












Click it and Unblock the Notifications