ಸೋನಿಯಾ ಗಾಂಧಿಯನ್ನು ಕರುಣಾನಿಧಿ ಬ್ಲ್ಯಾಕ್ ಮೇಲ್ ಮಾಡಿದ್ದರೇ?

Karunanidhi blackmailed Sonia
ನವದೆಹಲಿ, ಮೇ 23: ಸದ್ಯ ಕರುಣಾನಿಧಿಗೆ ಆಘಾತಗಳ ಮೇಲೆ ಆಘಾತಗಳು ಅಪ್ಪಳಿಸುತ್ತಿವೆ. ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಹೀನಾಯ ಸೋಲನ್ನು ಅನುಭವಿಸಿದೆ. ಕರುಣಾನಿಧಿ ಮಗಳು ಕನಿಮೋಳಿ 2ಜಿ ಸ್ಪೆಕ್ಟ್ರಮ್ ಆರೋಪದಲ್ಲಿ ಜೈಲು ಸೇರಿದ್ದಾಳೆ.

ದೇಶದ ರಾಜಕೀಯ ಬಗ್ಗೆ ದಿ ಹಿಂದೂ ವಿಕಿಲೀಕ್ಸ್ ಕೇಬಲ್ ವರದಿಗಳನ್ನು ಹರಿಯಬಿಡುತ್ತಿದೆ. ಇದೇ ಮೊದಲ ಬಾರಿಗೆ ತಮಿಳುನಾಡು ರಾಜಕೀಯವನ್ನು ಕೆದಕಿದ ವಿಕಿಲೀಕ್ಸ್, ಸೋನಿಯಾ ಗಾಂಧಿಯವರನ್ನು ಕರುಣಾನಿಧಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿರುವುದನ್ನು ಬಹಿರಂಗಪಡಿಸಿದೆ.

2008ರ ಇಸವಿಯಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್ ಅಮೆರಿಕದ ಪ್ರಧಾನ ಅಧಿಕಾರಿಯವರೊಂದಿಗೆ ಆಡಿದ ಮಾತು ಸ್ಪೋಟಗೊಂಡಿದೆ. ಮಾರನ್ ಅವರು ಕರುಣಾನಿಧಿ ಮತ್ತು ಅವರ ಪಕ್ಷದ ಭ್ರಷ್ಟಾಚಾರವನ್ನು ಕೂಡ ಆಗ ಟೀಕಿಸಿದ್ದರು.

"ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ರಾಜಿನಾಮೆ ನೀಡುವುದಾಗಿ ಹೇಳಿದ್ದು ಕೇವಲ ನಾಟಕ. ಇದರ ಉದ್ದೇಶ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶ್ರೀಲಂಕದ ತಮಿಳರ ವಿಷಯವನ್ನು ಹಿಡಿದುಕೊಂಡು ಬ್ಲ್ಯಾಕ್ ಮೈಲ್ ಮಾಡುವುದಾಗಿದೆ" ಎಂಬ ಮಾರನ್ ಮಾತನ್ನು ದಿ ಹಿಂದು ವಿಕಿಲೀಕ್ಸ್ ಕೇಬಲ್ ಬಹಿರಂಗಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+