ಧಾರವಾಡದಲ್ಲಿ ಮೇ 28ರಂದು ವಿಕಿಪೀಡಿಯ ಕಾರ್ಯಾಗಾರ

ಮೇ 28 ಶನಿವಾರದಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಸ್ ಕಮ್ಯುನಿಕೇಷನ್ ಮತ್ತು ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ 1.30ರವರೆಗೆ ಕಾರ್ಯಾಗಾರ ಆಯೋಜಿಸಲಾಗಿದೆ.
ಕನ್ನಡದ ವಿಕಿ ಯೋಜನೆಗಳ ಬಗ್ಗೆ ಕಿರುಪರಿಚಯ ಮತ್ತು ಸದ್ಯದ ಸ್ಥಿತಿಗಳ ವಿವರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಕನ್ನಡ ವಿಕಿಪೀಡಿಯವನ್ನು ಸಂಪಾದಿಸುವ ಬಗ್ಗೆ ಪರಿಚಯ ಮಾಡಿಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಧಾರವಾಡ-ಹುಬ್ಬಳ್ಳಿಯಲ್ಲಿರುವ ಬರಹಗಾರರು, ಶಿಕ್ಷಣತಜ್ಞರು, ವಿದ್ಯಾರ್ಥಿಗಳು ಮತ್ತು ವಿಕಿಪೀಡಿಯಾದಲ್ಲಿ ಆಸಕ್ತಿವುಳ್ಳವರು ಭಾಗವಹಿಸಬಹುದು. ಭಾಗವಹಿಸುವವರು ಮೊದಲೇ ನೊಂದಾಯಿಸಿಕೊಳ್ಳಬಹುದು.
ಕಾರ್ಯಕ್ರಮದ ವಿವರ :
ದಿನಾಂಕ : ಮೇ 28, 2011, ಶನಿವಾರ
ವೇಳೆ : ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30
ಸ್ಥಳ : ಸಭಾಂಗಣ, ಮಾಸ್ ಕಮ್ಯುನಿಕೇಷನ್ ಮತ್ತು ಪತ್ರಿಕೋದ್ಯಮ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಹೆಚ್ಚಿನ ವಿವರಗಳಿಗಾಗಿ ನೋಡಿರಿ : http://bit.ly/myg0NS












Click it and Unblock the Notifications