ದಾವೂದ್ ಮಗನ ಮದುವೆಗೆ ಲಾಡೆನ್ ಸಾವು ಅಪಶಕುನ

"ಕಿಲ್ ಒಸಾಮಾ" ಕಾರ್ಯಾಚರಣೆ ಮೂಲಕ ಒಬಾಮಾ ಪಡೆ ಲಾಡೆನನ್ನು ಮುಗಿಸಿಹಾಕಿತ್ತು. ಆ ಮೂಲಕ 9/11 ದಾಳಿಗೆ ಪ್ರತಿಕಾರ ತೀರಿಸಿತ್ತು. ಆದರೆ 1993ರ ಮುಂಬೈ ಬಾಂಬ್ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿರುವುದಾಗಿ ಭಾರತ ಸೇರಿದಂತೆ ಎಲ್ಲರೂ ಬೆರಳು ತೋರಿಸುತ್ತಿದ್ದಾರೆ.
ಪಾಕಿಸ್ತಾನವೂ ಅಂಡರ್ ವಲ್ಡ್ ಡಾನ್ ದಾವೂದ್ ನನ್ನು ಪೋಷಿಸುತ್ತಿರುವುದಕ್ಕೆ ಭಾರತದ ತನಿಖಾ ಏಜೆನ್ಸಿಗಳು ಇಂಟರ್ ಪೂಲ್ ಸಹಾಯದಿಂದ ಸಾಕಷ್ಟು ಸಾಕ್ಷಿಗಳನ್ನು ಅಲ್ಲಿನ ಸರಕಾರಕ್ಕೆ ನೀಡಿತ್ತು. ಆತ ಕರಾಚಿಯ ಕ್ಲಿಪ್ಟೋನ್ ನಲ್ಲಿರುವ ಬಂಗಲೆಯೊಂದರಲ್ಲಿ ಇರುವುದಾಗಿ ಹೇಳಲಾಗುತ್ತಿದೆ.
ಲಾಡೆನ್ ಸಾವಿನ ನಂತರ ದಾವೂದ್ ಗೆ ಸಹಜವಾಗಿಯೇ ಬಿಸಿಮುಟ್ಟಿದೆ. ಹೀಗಾಗಿ ಮೇ 28ರಂದು ನಡೆಯಬೇಕಿದ್ದ ತನ್ನ ಮಗನ ಮದುವೆ ರಿಸೆಪ್ಷನ್ ಪಾರ್ಟಿಯನ್ನು ಮುಂದೂಡಿದ್ದಾನೆ ಎಂದು ಆತನ ಕುಟುಂಬದ ನಿಕಟವರ್ತಿಗಳು ತಿಳಿಸಿದ್ದಾರೆ. ದಾವೂದ್ ಇಬ್ರಾಹಿಂ ಮಗ ಮೊಹಿನ್ ಮದುವೆ ಮೇ 27ರ ಶುಕ್ರವಾರ ನಡೆಯಲಿದೆ.
ಇದು ತನ್ನ ಮಕ್ಕಳ ಕೊನೆಯ ಮದುವೆಯಾದ ಕಾರಣ ಮೊಹಿನ್ ಮದುವೆ ಪಾರ್ಟಿಯನ್ನು ಭರ್ಜರಿಯಾಗಿ ನಡೆಸಲು ದಾವೂದ್ ಬಯಸಿದ್ದಾನೆ. ಆದರೆ ಸದ್ಯ ವಾತಾವರಣ ಆತನಿಗೆ ಪೂರಕವಾಗಿಲ್ಲದ ಕಾರಣ ದಿನಾಂಕ ಬದಲಾವಣೆ ಮಾಡುವಂತೆ ಆತ ಸೂಚಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಮುಂಬೈನಲ್ಲಿ ದಾವೂದ್ ಸಹೋದರನ ಮೇಲೆ ದಾಳಿ ಮಾಡಲಾಗಿತ್ತು. ದಾವೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎನ್ನುವುದಕ್ಕೆ ದಾವೋದ್ ಪುತ್ರಿಯನ್ನು ಪಾಕಿಸ್ತಾನ ಕ್ರಿಕೆಟ್ ಆಟಗಾರನ ಮಗಳಿಗೆ 2005ರಲ್ಲಿ ಮದುವೆ ಮಾಡಿಕೊಟ್ಟಾಗಲೇ ಭಾರತಕ್ಕೆ ಬಹುತೇಕ ಖಾತರಿಯಾಗಿತ್ತು.












Click it and Unblock the Notifications