ಅಪ್ಪಾ, ನಮಗಿಂತಾ ಇನ್ಫೋಸಿಸ್ ಅನ್ನೇ ಹೆಚ್ಚಾಗಿ ಪ್ರೀತಿಸ್ತೀಯಾ!?

NR Narayana Murthy
ಬೆಂಗಳೂರು, ಮೇ 22: ಇನ್ಫೋಸಿಸ್ ಕಂಪನಿ ಪಿತಾಮಹ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಮೂವರು ಮಕ್ಕಳಂತೆ? ರೋಹನ್, ಅಕ್ಷತಾ ಮತ್ತು ಇನ್ಫೋಸಿಸ್. ಅದಕ್ಕೇ ಅವರನ್ನು ಇನ್ಫೋಸಿಸ್ ಪಿತಾಮಹ ಎಂದು ಕರೆದಿರುವುದು.

ಇನ್ಫಿ ಎಂಬ ಮಗುವಿಗೆ 1981ರಲ್ಲಿ ನಾವು ಒಂದಷ್ಟು ಮಂದಿ ಸೇರಿ ಜನ್ಮ ನೀಡಿದೆವು. ಪ್ರಸವ, ಬಾಲ್ಯ ಕಡುಕಷ್ಟವಾಗಿತ್ತು. ಮುಂದೆ ಅದು ಹೆಮ್ಮೆಯ ಹೆಮ್ಮರವಾಗಿ ಬೆಳೆಯಿತು. ಸಂತೋಷವೇ ಆದರೆ ಇದೇ ಆಗಸ್ಟ್ ಗೆ ಅದನ್ನು ಬೇರೊಬ್ಬರಿಗೆ ಪರಭಾರೆ ಮಾಡುವುದು ಅನಿವಾರ್ಯವಾಗಿದೆ. ಅದು ಮಗಳನ್ನು ಮದುವೆ ಮಾಡಿ, ಕಳಿಸಿಕೊಡುವಂತೆ. ಹೊಸ ಪರಿಸರದಲ್ಲಿ ಮತ್ತಷ್ಟು ಬಲಿಷ್ಠವಾಗಲಿ ಎಂಬ ಹಾರೈಕೆ ನನ್ನದು ಎಂದು ಇನ್ಫಿ ಮೂರ್ತಿ ಇತ್ತೀಚೆಗೆ ತಮ್ಮ ದುಃಖವನ್ನು ತೋಡಿಕೊಂಡಿದ್ದು, ಮನಸು ಹಗುರ ಮಾಡಿಕೊಂಡಿದ್ದಾರೆ.

ಇನ್ಫೋಸಿಸ್ ನ ಪ್ರತಿಯೊಂದು ನಿರ್ಧಾರದಲ್ಲೂ ಮೂಗುತೂರಿಸುತ್ತಿದೆ. ಮನೆಯ ಹಿರಿಯನಾಗಿ ಇದು ಅನಿವಾರ್ಯವಾಗಿತ್ತು. ಇದರ ಫಲವನ್ನು ಎಲ್ಲರೂ ಉಣ್ಣುವಂತಾಗಿದೆ ಎಂದು ಎನ್ನಾರೆನ್ ಬದುಕಿನ ಸಂಜೆಯಲ್ಲಿ ಹಿನ್ನೋಟ ಬೀರಿದ್ದಾರೆ. ಇಡೀ ದಿನ ಉರಿಬಿಸಿಲಲ್ಲಿ ದುಡಿದು ಸಂಜೆ ವೇಳೆಗೆ ಉಸ್ಸಪ್ಪಾ ಎಂದು ಮನೆಗೂಡಿಗೆ ಸೇರಿಕೊಂಡ ಅನುಭವ ಅವರದಾಗಿದೆ.

ಈ ನಡುವೆ ಬೆಳಗಿನಿಂದ ಸಂಜೆ ವರೆಗೆ ವೈಯಕ್ತಿಕಗಾಗಿ ಅವರು ಕಳೆದುಕೊಂಡಿರುವುದ ಬಹಳಷ್ಟು. 80ರ ದಶಕದಲ್ಲಿ ಮನೆ ಮತ್ತು ಕಚೇರಿ ನಡುವಣ ಹೊಯ್ದಾಟ ತೀವ್ರವಾಗಿತ್ತು. ರೋಹನ್ ಮತ್ತು ಅಕ್ಷತಾ ಇನ್ನೂ ಚಿಕ್ಕವರು. ಇನ್ಫೋಸಿಸ್ಸೂ ಅಜಮಾಸು ಅದೇ ವಯಸ್ಸಿನದು. ರೋಹನ್ ಒಂದು ದಿನ ಹೀಗೆ ಕೇಳಿಯೇ ಬಿಟ್ಟ: ಏನಪ್ಪಾ, ನಮಗಿಂತಾ ಇನ್ಫೋಸಿಸ್ ಅನ್ನೇ ಹೆಚ್ಚಾಗಿ ಪ್ರೀತಿಸ್ತೀಯಾ!? ದಿನದ 16 ಗಂಟೆ, ವರ್ಷದ 330 ದಿನಗಳನ್ನು ಕಂಪನಿಗಾಗಿ ಜೀವ ಸವೆಸುತ್ತಿರುವ ವ್ಯಕ್ತಿಯ ಬಗ್ಗೆ ಅಬೋಧ ಮಕ್ಕಳಲ್ಲಿ ಇಂತಹ ಸಂಶಯ ಮನೆ ಮಾಡುವುದು ಸಹಜವೇ. ಏಕೆಂದರೆ....

'ಕಂಪನಿಯ ಆಯಕಟ್ಟಿನ ಸ್ಥಾನದಲ್ಲಿ ನಿಂತು ಅದರ ಪ್ರತಿಯೊಂದು ಬೇಕು-ಬೇಡಗಳನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಇತ್ತು. ಕಂಪನಿ ಲೋಗೊ ಬಿಡಿಸುವುದರಲ್ಲಿ, ಕಂಪನಿ ಬಗ್ಗೆ ಗ್ರಾಹಕರಿಗೆ ತಿಳಿಯ ಹೇಳಲು ಅಗತ್ಯವಾದ ಸಾಹಿತ್ಯ ಕಟ್ಟುವುದರಲ್ಲಾಗಲಿ, ಕ್ಯಾಂಪಸ್ಸಿನಲ್ಲಿ ಪ್ರತಿಯೊಂದರ ಬಗ್ಗೆಯೂ ಸೂಕ್ಷ್ಮವಾಗಿ ನಿಗಾವಹಿಸುವುದು ಅತ್ಯಗತ್ಯವಾಗಿದ್ದ ದಿನಗಳು ಅವು. ಏಕೆಂದರೆ ಇನ್ಫಿ ಎಂಬ ಮಗು ಇನ್ನೂ ಅಂಬೆಗಾಲಿಡುತ್ತಿತ್ತು. ಅದರ ಬಗ್ಗೆ ಕಾಳಜಿ ವಹಿಸಲೇಬೇಕಿತ್ತು.

ಆದ್ದರಿಂದ ನನ್ನದೇ ಮಕ್ಕಳೊಂದಿಗೆ ವಾಗ್ವಾದ ನಡೆಸುವುದು ಕಷ್ಟವಾಗಿತ್ತು. ಅವರಿಗೆ ಪರಿಸ್ಥಿತಿಯನ್ನು ಮನದಟ್ಟುಪಡಿಸಿ, ತಿಳಿಯಹೇಳುವುದು ಕಷ್ಟವಾಗಿತ್ತು. ಅಮಾಯಕ ಪ್ರಶ್ನೆಗೆ ನಿರುತ್ತರನಾಗಿದ್ದೆ' ಎಂದು ಮನೆಯ ಹಿರಿಯ ನಾರಾಯಣ ಮೂರ್ತಿ ಇಷ್ಟೂ ದಿನ ತಮ್ಮ ಹೃದಯದಲ್ಲಿ ಮಡವುಗಟ್ಟಿದ್ದ ದುಃಖವನ್ನು ಹೊರಹಾಕಿ ಹಗುರವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+