ತಿಹಾರ್ ಜೈಲಿನಲ್ಲಿ ಕನ್ನಿಮೋಳಿ ಮೊದಲ ರಾತ್ರಿ

ಮಹಿಳಾ ವಾರ್ಡ್ ನಲ್ಲಿರುವ ಬಂದಿಖಾನೆಯಲ್ಲಿ ಯಾವುದೇ ಎಸಿ, ಫ್ಯಾನು, ಏರ್ ಕೂಲರ್ ಯಾವುದೂ ಇಲ್ಲ. ಕಿಟಕಿಯಿಂದ ತೂರಿ ಬರುವ ಸ್ವಚ್ಛಂದ ಗಾಳಿಯನ್ನು ಹೀರುವ ಸೊಗಸಾದ ಅನುಭವ. ಮನೆಯಿಂದ ತರಿಸಿಕೊಂಡಿದ್ದ ಬಿಸಿಬಿಸಿ ಊಟ ಮಾಡಿ ರಾತ್ರಿ 11.30ಕ್ಕೆ ನಿದ್ರೆಗೆ ಜಾರಿದರು. [ಸಕಲಕಲಾವಲ್ಲಭೆ ಕನ್ನಿಮೋಳಿ ವ್ಯಕ್ತಿಚಿತ್ರ]
ಶನಿವಾರ ಬೆಳಿಗ್ಗೆ ಏಳುತ್ತಿದ್ದಂತೆ, ಹೊಸ ಬದುಕು ಆರಂಭ. ಎಲ್ಲ ಕೈದಿಗಳಂತೆ 5.30ಕ್ಕೆ ಎಬ್ಬಿಸಲಾಯಿತು. ಪ್ರಾತಃರ್ವಿಧಿಗಳಾದ ನಂತರ ಮನೆಯ ತಿಂಡಿಯ ಬದಲು ಎರಡು ಬ್ರೆಡ್ ಸ್ಲೈಸ್ ಮತ್ತು ಅದರ ಮೇಲೆ ಆಲೂಗಡ್ಡೆ ಪಲ್ಯ. ವೈಭವದ ಬದುಕಿನಿಂದ ದೂರವಾಗಿರುವ ಹೊಸ ಬದುಕಿಗೆ ಕಾಲಿಟ್ಟಿರುವ ಕನ್ನಿಮಳಿ 9.30ಕ್ಕೆ ನಗುಮೊಗದಿಂದಲೇ ಕೋರ್ಟಿಗೆ ಹಾಜರಾದರು.
ಅವರಿರುವ ಪಕ್ಕದ ಸೆಲ್ ನಲ್ಲಿ ಪಾಕಿಸ್ತಾನದ ಐಎಸ್ಐ ಪರ ಬೇಹಾಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಠಕ್ಕಿ ಮಾಧುರಿ ಗುಪ್ತಾ ಮತ್ತು ಕೊಲೆಯಲ್ಲಿ ಬಂಧಿತೆಯಾಗಿರುವ ಶಾರದಾ ಜೈನ್ ಎಂಬ ಹೈಪ್ರೊಫೈಲ್ ಮಹಿಳೆಯರು ಕಂಬಿ ಎಣಿಸುತ್ತಿದ್ದಾರೆ.












Click it and Unblock the Notifications