ದೋಷಪೂರ್ಣ ಮೀಟರ್ : ಆಟೋ ಚಾಲಕರಿಗೆ ದಂಡ

ಬೆಂಗಳೂರಿನಲ್ಲಿ ಸಾರ್ವಜನಿಕರು ಅಡ್ಡಾಡುವ ಪ್ರಮುಖ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಕೂಲಂಕಷವಾಗಿ ತಪಾಸಣೆ ನಡೆಸಿ, ದೋಷವಿರುವ ಮೀಟರ್ ಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಮೋಸ ಮಾಡುತ್ತಿದ್ದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳಲ್ಲಿ ಒಟ್ಟು 1494 ಆಟೋಗಳನ್ನು ಪರಿಶೀಲಿಸಲಾಗಿದೆ.
ಇವುಗಳಲ್ಲಿ 111 ಮೊಕದ್ದಮೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ 62,000 ರು.ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇನ್ನು ಮುಂದೆ ಇಂತಹ ಉಲ್ಲಂಘನೆಗಳಿಗೆ ಅವಕಾಶ ಮಾಡಿಕೊಡಬಾರದೆಂದು ಚಾಲಕರಿಗೆ/ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಆಟೋ ಮೀಟರ್‌ಗಳ ದರದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಕಾನೂನು ಮಾಪನಶಾಸ್ತ್ರ ಇಲಾಖೆಯ ಕಛೇರಿಗೆ ಮುಂದೆ ತಿಳಿಸಿದ ದೂರವಾಣಿ/ಇ-ಮೇಲ್ ಮುಖಾಂತರ ದೂರುಗಳನ್ನು ನೀಡಬಹುದು. ದೂರವಾಣಿ ಸಂಖ್ಯೆ: 1) 080-22260554 2) 080-22207750 ಹಾಗೂ ಇ-ಮೇಲ್ ವಿಳಾಸ: [email protected].
ಸಮ್ಮೇಳನ : ಅಂದ ಹಾಗೆ, ಇದೆ ಮೇ 31 ಮತ್ತು ಜೂನ್ 1ರಂದು ನಗರದ ಟೌನ್ ಹೌಲ್ ನಲ್ಲಿ ಬೆಂಗಳೂರಿನ ಆಟೋ ಚಾಲಕರು ತಮ್ಮ ಅನೇಕಾನೇಕ ಬೇಡಿಕೆಗಳನ್ನು ಆಗ್ರಹಿಸಿ ಎರಡು ದಿನಗಳ ಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ. ಆ ಸಮ್ಮೇಳನದಲ್ಲಿ ಬೇಡಿಕೆಗಳ ಜೊತೆಗೆ ಕರ್ತವ್ಯ ನಿರ್ವಹಣೆಯಲ್ಲಿ ನಡೆಯುತ್ತಿರುವ ತಪ್ಪುಒಪ್ಪುಗಳ ಬಗ್ಗೆಯೂ ಚರ್ಚೆ ನಡೆಯಲಿ.












Click it and Unblock the Notifications