ಅಮೆರಿಕಾಕ್ಕೆ ತಲೆನೋವಾಗಿರುವ ಅನಪೇಕ್ಷಿತ ಗರ್ಭಧಾರಣೆ

ಸಿಐಎ ಅಂಕಿಅಂಶಗಳ ಪ್ರಕಾರ, ನಾಗಾಲೋಟದಲ್ಲಿ ಸಾಗುತ್ತಿರುವ ಅಮೆರಿಕಾದ ಜನಸಂಖ್ಯೆ 310 ಮಿಲಿಯನ್. ಅಮೆರಿಕಾದಲ್ಲಿ ಆಗುವ ಗರ್ಭಧಾರಣೆಗಳಲ್ಲಿ ಶೇ.40ರಷ್ಟು ಅನಪೇಕ್ಷಿತವಾಗಿರುವುದು ಬರಾಕ್ ಒಬಾಮಾ ಸರಕಾರಕ್ಕೆ ಬಿಸಿ ತುಪ್ಪದಂತಾಗಿದೆ. ಇದರಲ್ಲಿ ಹೆಚ್ಚಿನವು ನಗರ ಪ್ರದೇಶಗಳಲ್ಲಿ ಆಗುತ್ತಿವೆ ಎಂದು ಬ್ರೂಕಿಂಗ್ ಇನ್ ಸ್ಟಿಟ್ಯೂಟ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಇದರ ನಿಯಂತ್ರಣಕ್ಕಾಗಿ ಅಮೆರಿಕಾ ಪ್ರತಿ ವರ್ಷ 11 ಬಿಲಿಯನ್ ಡಾಲರ್ ನಷ್ಟು ಖರ್ಚು ಮಾಡುತ್ತಿದ್ದರೂ ಯಾವುದೇ ಫಲ ಕಂಡಿಲ್ಲ. ದಕ್ಷಿಣ ಮತ್ತು ನೈರುತ್ಯ ಅಮೆರಿಕಾದ ಪ್ರಾಂತ್ಯಗಳಲ್ಲಿ ಅನಪೇಕ್ಷಿತ ಗರ್ಭಧಾರಣೆಯ ಪ್ರಮಾಣ ಅತಿ ಹೆಚ್ಚು. ಇದಕ್ಕೆ ಅನೇಕ ಕಾರಣಗಳಿದ್ದರೂ, ಪೂರ್ವನಿರ್ಧಾರಿತವಲ್ಲದ ಲೈಂಗಿಕ ಕ್ರಿಯೆಯಿಂದಾಗಿ ಹಿಡಿತಕ್ಕೆ ಸಿಗುತ್ತಿಲ್ಲ. ಗರ್ಭಪಾತದ ಪ್ರಮಾಣ ಕೂಡ ಪ್ರತಿವರ್ಷ ಹೆಚ್ಚುತ್ತಿದೆ.
ಗರ್ಭಧಾರಣೆ ನಿಯಂತ್ರಣಾ ನೀತಿಯನ್ನು ಇನ್ನಷ್ಟು ಕಠಿಣವಾಗಿ ಜಾರಿಗೆ ತಂದರೆ ವಿತ್ತೀಯ ಕೊರೆಯನ್ನು ನೀಗಿಸಲು ಸಾಧ್ಯ ಎಂದು ಬ್ರೂಕಿಂಗ್ ಸಂಸ್ಥೆಯ ಸಂಶೋಧನಾ ನಿರ್ದೇಶಕ ಆಡಮ್ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ಆರೋಗ್ಯಕ್ಕಾಗಿ ಸರಕಾರ ವ್ಯಯಿಸುತ್ತಿರುವ ಹಣವನ್ನು ಕಡಿತಗೊಳಿಸುವುದು ಮತ್ತು ಸಣ್ಣವಯಸ್ಸಿನ ಮಕ್ಕಳು ಗರ್ಭಧರಿಸದಂತೆ ಪಾಲಕರು ನಿಯಂತ್ರಣ ಹೇರಬೇಕೆಂದು ಹೇಳಿದ್ದಾರೆ.












Click it and Unblock the Notifications