ಮೈಸೂರು: ಅಪ್ರಾಪ್ತೆ ಮೇಲೆ ಪೇದೆ ಅತ್ಯಾಚಾರ ಯತ್ನ

"ಈ ಘಟನೆ ಕುರಿತು ಮೇ 2ರಂದೇ ಪೋಲಿಸರಿಗೆ ದೂರು ನೀಡಲಾಗಿದೆ. ಆದರೆ ಸ್ಥಳೀಯ ಪೋಲಿಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ" ಎಂದು ಮಾನವ ಹಕ್ಕು ಶಿಕ್ಷಣ ವಿಭಾಗದ ಪ್ರಕಾಶ್ ಕಾರ್ಯಪ್ಪ ಹೇಳಿದ್ದಾರೆ. ಆರೋಪಿಯ ತಂದೆ ಪೋಲಿಸ್ ಇನ್ಸೆಪೆಕ್ಟರ್ ಆಗಿದ್ದು ತನ್ನ ಮಗನನ್ನು ರಕ್ಷಿಸುತ್ತಿದ್ದಾರೆ" ಎಂದರು.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾನ್ಸೆಟಬಲ್ ಲೋಹಿತ್ ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿದ್ದಾನೆ. ಈ ಕುರಿತು ಹುಡುಗಿ ಕೆಲವು ವಾರಗಳ ಕಾಲ ಯಾರಲ್ಲೂ ಬಾಯಿಬಿಟ್ಟಿರಲಿಲ್ಲ. ಕೊನೆಗೆ ಹೆತ್ತವರಿಗೆ ವಿಷಯ ತಿಳಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೋಲಿಸರಿಗೆ ಈ ತಿಂಗಳ ಆರಂಭದಲ್ಲಿಯೇ ದೂರು ನೀಡಲಾಗಿತ್ತು. ಇನ್ನೂ ಎಫ್ಐಆರ್ ದಾಖಲಿಸದೇ ಸತಾಯಿಸುತ್ತಿದ್ದರು. ಅತ್ಯಾಚಾರಕ್ಕೆ ಪರಿಹಾರವಾಗಿ ಒಂದು ಸಾವಿರ ರು. ಮತ್ತು ಆಕೆಯ ಶಿಕ್ಷಣಕ್ಕೆ ಸಹಾಯ ಮಾಡು ಭರವಸೆಯನ್ನು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ನೀಡಿದ್ದಾರೆ ಎನ್ನಲಾಗಿದೆ.
ಪೋಲಿಸ್ ಕಾನ್ಸೆಟಬಲ್ ಲೋಹಿತ್ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.












Click it and Unblock the Notifications