ದೇಶದ ಮಾನ ಹರಾಜು ಹಾಕಿದ ರಾಜನಿಗೆ 2ನೇ ಸ್ಥಾನ
ನವದೆಹಲಿ,
ಮೇ 19 : ಡಿಎಂಕೆ ನಾಯಕ, ಕೇಂದ್ರದ ಬೊಕ್ಕಸದಿಂದ 1.87 ಲಕ್ಷ ಕೋಟಿ ರು.ನಷ್ಟು ಹಣವನ್ನು ಮುಂಡಾಮೋಚಿದ ಮಾಜಿ ದೂರಸಂಪರ್ಕ ಸಚಿವ ಎ ರಾಜಾ ಟೈಮ್ಸ್ ನಿಯತಕಾಲಿಕ ನಡೆಸಿದ ಸರ್ವೇಯಲ್ಲಿ ಮೊದಲನೇ ಸ್ಥಾನವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದಾರೆ. ವಿಶ್ವದಲ್ಲೇ ಅತ್ಯಂತ ಭ್ರಷ್ಟವಾಗಿ ಅಧಿಕಾರ ದುರುಪಯೋಗ ಪಡೆಸಿಕೊಂಡವರ ಪಟ್ಟಿಯಲ್ಲಿ ರಾಜಾ ಎರಡನೇ ಸ್ಥಾನ ಪಡೆದು ಕುಖ್ಯಾತಿಗೆ ಒಳಗಾಗಿದ್ದಾರೆ! id="toptextpromo">ಲಿಬಿಯಾ
ದೇಶದ ಸರ್ವಾಧಿಕಾರಿ ಗಡಾಫಿ, ಉತ್ತರ ಕೊರಿಯಾದ ಸ್ವೇಚ್ಛಾಡಳಿತಗಾರ ಕಿಂ ಜಾಂಗ್ ಇಲ್ ಮತ್ತು ಇಟಲಿಯ ಸಿಲ್ವಿಯೋ ಬೇರ್ಸುಲೋನಿ ಮುಂತಾದ ಮಹಾನ್ ಭ್ರಷ್ಟರನ್ನು ಹಿಂದಿಕ್ಕಿ ಎ ರಾಜಾ ಈ ಅಪಖ್ಯಾತಿಯ ಸಾಧನೆಗೈದು ಭಾರತದ ದೂರಸಂಪರ್ಕ ಇಲಾಖೆಯ ಮಾನ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಿಗೆ ಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಶ್ವದ
ಬಿಲಿಯನೇರ್ ಪಟ್ಟಿಯಲ್ಲಿ ನಮ್ಮ ದೇಶದ ಹಲವಾರು ಶ್ರೀಮಂತರ ಹೆಸರನ್ನು ಬಿಡುಗಡೆ ಮಾಡುತ್ತಿದ್ದ ಟೈಮ್ಸ್ ನ ಈ ಸರ್ವೆಯಲ್ಲಿ ಭಾರತೀಯನೊಬ್ಬನ ಹೆಸರು ಇರುವುದು ತಲೆ ತಗ್ಗಿಸುವಂತದ್ದು. ಇಸ್ರೇಲ್ ಅಧ್ಯಕ್ಷ ಮೋಸ್ ಕ್ಯಾತ್ಸಾವ್, ಅಮೆರಿಕಾದ ಮಾಜಿ ಆಂತರಿಕ ಆಡಳಿತ ಕಾರ್ಯದರ್ಶಿ ಅಲ್ಬರ್ಟ್ ಫಾಲ್ ಮುಂತಾದವರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದ ಹಾಗೆ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಅಮೆರಿಕಾದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಪಾಲಾಗಿದೆ ಎಂದು ಟೈಮ್ಸ್ ತನ್ನ ಸರ್ವೇಯಲ್ಲಿ ತಿಳಿಸಿದೆ. (ಕೃಪೆ: ಇಂಡಿಯ ಟುಡೇ)











Click it and Unblock the Notifications