ಇವನಿಗೆ ಭರ್ತಿ 107 ಹೆಂಡತಿಯರು...185 ಮಕ್ಕಳು

* ಯಾರಿವನು?
ಹೆಸರು ಬೆಲ್ಲೊ ಮಸಬಾ. ನೈಜೀರಿಯಾದ ಪ್ರಜೆ. ಇಸ್ಲಾಂ ಧರ್ಮ.
* ಏನು ಇವನ ಸ್ಪೆಷಲ್?
ಸಾಮನ್ಯ ವಿಶೇಷ ಅಲ್ಲ. ಈ ಭೂಪ 107 ಹೆಂಡತಿಯರಿಗೆ ಮುದ್ದಿನ ಗಂಡ.
* ಹಾಗಾದರೆ ಅವನಿಗೆ ಮಕ್ಕಳೆಷ್ಟು?
ಹೆಂಡತಿಯರಿಗೆ ಹೋಲಿಸಿದರೆ ಜಾಸ್ತಿ ಏನಲ್ಲ. ಕೇವಲ 185 ಮಕ್ಕಳ ಅಪ್ಪ.
* ಅವನ ಪ್ರಾಯ?
ಇನ್ನೂ 87ರ ಹರೆಯ!
* ಅಬ್ಬಾ..! ಇವ್ರನ್ನೆಲ್ಲ ಹೇಗೆ ಸಾಕ್ತಾನೆ? ಏನು ಕೆಲಸ ಅವನಿಗೆ?
ವೃತ್ತಿಯಲ್ಲಿ ನಾಟಿ ವೈದ್ಯ. ಸ್ವಲ್ಪ ಭೂಮಿ ಇದೆ. ಇವನು ಅಲ್ಲಿನ ರಾಜಕಾರಣಿಗಳಿಗಿಂತ ಫೇಮಸ್. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸೆಲೆಬ್ರೆಟಿ.
* ಹಾಗಾದರೆ ಅವನ ಮನೆ ಹೇಗಿದೆ?
ಅದು ದೊಡ್ಡ ಮನೆ. 85 ರೂಂಗಳಿವೆ. ಅದರಲ್ಲಿ ತನ್ನ ಎಲ್ಲಾ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾನೆ.
* ಇವನು ಅಷ್ಟು ಮದುವೆ ಆಗಿರೋದಕ್ಕೆ ಯಾರೂ ಕೇಸ್ ಹಾಕಿಲ್ಲವೇ? ಅಲ್ಲಿನ ಸರಕಾರ, ಕೋರ್ಟ್ ಚಕಾರ ಎತ್ತಿಲ್ಲವೇ?
ಚಕಾರ ಎತ್ತುವರಿದ್ರು. ಅವನ ವಿರುದ್ಧ ಸಾಕಷ್ಟು ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಗೆ ಆತನ ಪತ್ನಿಯರೇ ಬಂದು ಬಚಾವ್ ಮಾಡಿದ್ದಾರೆ. ಅವನ ಪತ್ನಿಯರಿಗೆ ಅಷ್ಟೊಂದು ಪ್ರೀತಿ ಅವನ ಮೇಲೆ.
* ತುಂಬಾ ಇಂಟ್ರೆಸ್ಟಿಂಗ್ ವ್ಯಕ್ತಿ. ಇನ್ನು ನಾನು ಪ್ರಶ್ನೆ ಕೇಳೋದಿಲ್ಲ. ನೀವು ಹೇಳ್ತಾ ಹೋಗಿ..
ಇವನ ಹಿರಿಯ ಹೆಂಡತಿಯ ವಯಸ್ಸು 65. ಕಿರಿಯ ಹೆಂಡತಿಗೆ ಇನ್ನೂ 19 ವರ್ಷ. 107 ಹೆಂಡತಿಯರಲ್ಲಿ 9 ಮಂದಿ ಸತ್ತು ಹೋಗಿದ್ದಾರೆ. 12 ಜನ ಸಾಕಪ್ಪ ಇವನ ಸಹವಾಸ ಅಂತ ಡೈವೋರ್ಸ್ ನೀಡಿ ಹೋಗಿದ್ದಾರೆ. ಉಳಿದ 86 ಮಂದಿ ಇವನೊಂದಿಗೆ ಸುಖ(?)ವಾಗಿ ದಾಂಪತ್ಯ ನಡೆಸುತ್ತಿದ್ದಾರೆ. 185 ಮಕ್ಕಳಲ್ಲಿ ಸುಮಾರು 50 ಮಕ್ಕಳು ಈಗ ಬದುಕಿಲ್ಲ. ಇದಕ್ಕೆ "ದೇವರು ಕೊಟ್ಟ ಅವ್ನೆ ಕರೆಸಿಕೊಂಡ" ಅಂತ ಮಸಬಾ ವೇದಾಂತ ಹೇಳುತ್ತಾನೆ. ಇನ್ನು ಮದುವೆ ಆಗ್ತಿರಾ.. ಅಂತ ಕೇಳಿದ್ರೆ ಹೌದು ಇನ್ನೂ 108 ಮದುವೆ ಆಗೋಕೆ ರೆಡಿ ಇದ್ದಿನಿ ಅನ್ತಾನೆ... ಸೆಕ್ಸ್ ಪವರ್ ಬಗ್ಗೆ ಕೇಳಿದ್ರೆ ನಂಗೆ ದೇವರು ಸಾಕಷ್ಟು ಪವರ್ ನೀಡಿದ್ದಾನೆ. ನಾನು ಕೈಲಾದಷ್ಟು ಮಾಡ್ತಿನಿ. ಸಾಕಾಗದವರು ಬಿಟ್ಟು ಹೋಗಬಹುದು ಅಂತ ಮುಕ್ತ ಅಫರ್ ಇಡ್ತಾನೆ. ಇನ್ನೇನದರೂ ಪ್ರಶ್ನೆ ಕೇಳ್ತಿರಾ... ಓಹ್ ನೀವು ಆಗ್ಲೆ ನಿದ್ದೆ ಹೋದ್ರಾ












Click it and Unblock the Notifications