ಪಾದ್ರಿಗಳಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಅಂತ್ಯಕ್ಕೆ ಕರೆ
ವ್ಯಾಟಿಕನ್
ಸಿಟಿ, ಮೇ. 17 : ಪಾದ್ರಿಗಳಿಂದ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಕಳಂಕ ತೊಲಗಿಸಲು ವ್ಯಾಟಿಕನ್ ಮುಂದಾಗಿದೆ. ಜಗತ್ತಿನಲ್ಲಿರುವ ಎಲ್ಲಾ ಬಿಷಪರಿಗೆ ಚರ್ಚುಗಳ ಮೇಲಿರುವ ಈ ಕಳಂಕ ತೊಡೆದು ಹಾಕುವಂತೆ ರೋಮನ್ ಕ್ಯಾಥೋಲಿಕ್ ಚರ್ಚ್ ಹೆಡ್ ಕ್ವಾರ್ಟರ್ಸ್ ನಿಂದ ಸುತ್ತೋಲೆ ಹೊರಡಿಸಲಾಗಿದೆ. id="toptextpromo">ಇಂತಹ
ದೂರುಗಳು ಕಂಡುಬಂದಾಕ್ಷಣ ಸ್ಥಳೀಯ ಕಾನೂನು ಚೌಕಟ್ಟಿನಲ್ಲಿ ದೂರು ದಾಖಲಿಸುವಂತೆ ಬಿಷಪರಿಗೆ ಸೂಚಿಸಲಾಗಿದೆ. ಇಂತಹ ಕೃತ್ಯವೆಸಗಿದವರ ಮೇಲೆ ಕೈಗೊಳ್ಳುವ ಕಠಿಣ ಕ್ರಮಗಳ ನೀತಿ ನಿರೂಪಣೆಗಳನ್ನು ನೂತನ ಸುತ್ತೋಲೆಯಲ್ಲಿ ತಿಳಿಸಲಾಗಿದೆ. "ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕೊನೆಗೊಳಿಸುವುದು ಬಿಷಪರ ಪ್ರಮುಖ ಆದ್ಯತೆಯಾಗಬೇಕು" ಎಂದು ವ್ಯಾಟಿಕನ್ ಒತ್ತಿ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ನೂತನ
ತಿದ್ದುಪಡಿಯಿಂದಾಗಿ ಲೈಂಗಿಕ ದೌರ್ಜನ್ಯ ಕುರಿತಾಗ ಚರ್ಚ್ ಕಾನೂನು ಇನ್ನಷ್ಟು ಬಲಿಷ್ಠವಾಗಿದೆ. ಅಪರಾಧವೆಸಗಿದ ಪಾದ್ರಿಗಳು ತಪ್ಪಿಸಿಕೊಳ್ಳಲಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಪಾದ್ರಿಗಳಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಹಲವು ಪ್ರಕರಣಗಳು ನಡೆದಿದ್ದವು.











Click it and Unblock the Notifications