ಅಡುಗೆ ಅನಿಲ, ಡೀಸೆಲ್, ಸೀಮೆಎಣ್ಣೆ ಶೀಘ್ರ ತುಟ್ಟಿ
ಕೋಲ್ಕತ್ತಾ,
ಮೇ.16: ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಸಲು ಕೇಂದ್ರ ಸರಕಾರ ಮುಂದಾಗಿದೆ. ಮುಂದಿನ ವಾರ ಸಭೆ ಸೇರಿ ಬೆಲೆ ಏರಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. id="toptextpromo">ಸುದ್ದಿಗಾರರೊಂದಿಗೆ
ಮಾತನಾಡುತ್ತಿದ್ದ ಅವರು, 2010ರ ಜೂನ್‌ನಲ್ಲಿ ಪೆಟ್ರೋಲ್ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ತೈಲ ಕಂಪನಿಗಳೇ ಬೆಲೆ ಏರಿಕೆ ನಿರ್ಧಾರ ತೆಗೆದುಕೊಳ್ಳುತ್ತಿವೆ ಎಂದು ತಿಳಿಸಿದರು. ಅಡುಗೆ ಅನಿಲ, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆಯನ್ನು ತಮ್ಮ ನೇತೃತ್ವದ ಸಚಿವರ ತಂಡ ನಿರ್ಧರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಸ್ತುತ
ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ರು.26, ಡೀಸೆಲ್ ರು.16 ಹಾಗೂ ಅಡುಗೆ ಅನಿಲ ಸಿಲಿಂಡೆರ್‌ಗೆ ರು.320 ಸಬ್ಸಿಡಿ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 110 ಡಾಲರ್ ಆಗಿದೆ ಎಂದ ಸಚಿವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. (ಏಜೆನ್ಸೀಸ್)











Click it and Unblock the Notifications