ಸ್ಲಮ್ ಹುಡುಗಿ ರಾಜ್ಯಕ್ಕೆ ಫಸ್ಟ್, ಮೇಸ್ತ್ರಿ ಮಗಳು ಕಾಲೇಜಿಗೆ ಫಸ್ಟ್

ಹೆಸರು ಇಸ್ರಾಬಾನು. ವಾಸ ಗದಗಿನ ರಾಜೀವ್ ಗಾಂಧಿ ನಗರದ ಸ್ಲಮ್. ಕನ್ನಡ ಮಾಧ್ಯಮದಲ್ಲಿ ಓದಿ ಕಲಾ ವಿಭಾಗದಲ್ಲಿ 600ಕ್ಕೆ 600ರಲ್ಲಿ 572(ಶೇ. 95.3) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ತಂದೆಗೆ ವಾರಕ್ಕೆ 800 ರೂ. ವೇತನ. ದೊಡ್ಡ ಕುಟುಂಬ. ಆದರೂ ಕಷ್ಟಪಟ್ಟು ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಪನ್ಯಾಸಕರು ಮತ್ತು ಕಾಲೇಜ್ ಆಡಳಿತದ ಪ್ರೋತ್ಸಾಹ ಸಾಧನೆಗೆ ಕಾರಣ ಎಂದು ಇಸ್ರಾ ಬಾನು ಹೇಳುತ್ತಾಳೆ. ಮುಂದೆ ಎಂಎ ಓದಿ ಇತಿಹಾಸ ಪಾಠ ಮಾಡುವುದು ಇಸ್ರಾ ಬಾನು ಕನಸು. [ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ 2011, Coming Soon!]
ಮೇಸ್ತ್ರಿಯ ಮಗಳು ಕಾಲೇಜಿಗೆ ಫಸ್ಟ್: ಮೈಸೂರಿನ ಸುಮಾ ಎಂ ಸೆಕೆಂಡ್ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಜೆಎಸ್ಎಸ್ ಕಾಲೇಜಿನಲ್ಲಿ ಪ್ರಥಮ ರಾಂಕ್ ಪಡೆದಿದ್ದಾಳೆ. ಆಕೆಯ ಅಪ್ಪನಿಗೆ ಮೇಸ್ತ್ರಿ ಕೆಲಸ. ಬಡತನ ಸಾಕಷ್ಟು ತಾಪತ್ರಯಗಳ ನಡುವೆಯೂ 600ಕ್ಕೆ 544 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಎಸ್ಎಸ್ಎಲ್ಸಿ ಮುಗಿಸಿದಾಗಲೇ ಆಕೆಯ ಓದು ನಿಲ್ಲಿಸಲು ಮನೆಯವರು ನಿರ್ಧರಿಸಿದ್ದರು. ಆದರೆ ಆಕೆಯ ಹಠ ಮತ್ತು ಕೋಪಕ್ಕೆ ಮಣಿದು ಮನೆಯವರು ಓದು ಮುಂದುವರೆಸಲು ಅವಕಾಶ ನೀಡಿದ್ದರು. ಆದರೆ ಆಕೆ ರಾಂಕ್ ಪಡೆದರೂ ಮುಂದೆ ಓದಿಸಲು ಬಡತನದಿಂದ ಸಾಧ್ಯವಿಲ್ಲವೆಂದು ಮನೆಯವರು ಕೈ ಚೆಲ್ಲುತ್ತಾರೆ. ಮುಂದೆ ಡಿಗ್ರಿ ಮುಗಿಸಿ ಸಿವಿಲ್ ಸರ್ವಿಸ್ ಗೆ ಸೇರುವ ಕನಸು ಆಕೆಯದ್ದು.












Click it and Unblock the Notifications