ಕಬ್ಬನ್ ಪಾರ್ಕ್ ನಲ್ಲಿ ವಾಯುಪಡೆಯಿಂದ ವಾದ್ಯಗೋಷ್ಠಿ
ಬೆಂಗಳೂರು,
ಮೇ 11: ನಗರದ ಸಂಗೀತ ಪ್ರೇಮಿಗಳಿಗೆ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಅವಕಾಶವಿದೆ. ವಾಯುಪಡೆಯ ಗಾಯಕರ ತಂಡವು ನಡೆಸಿಕೊಡುವ ವಾದ್ಯಮೇಳ ಗಾನಸುಧೆಯಲ್ಲಿ ನೀವು ಮೈಮರೆಯಬಹುದು. ಏರ್ ಫೋರ್ಸ್ ಸಿಂಫೋನಿ ಆರ್ಕೆಸ್ಟ್ರಾ ನಾಡಿದ್ದು ಶನಿವಾರ ಸಂಜೆ ಐದು ಗಂಟೆಗೆ ಉದ್ಯಾನನಗರಿಯ ಕಬ್ಬನ್ ಪಾರ್ಕಿನಲ್ಲಿ ನಡೆಯಲಿದೆ. id="toptextpromo">ಭಾರತದ
ವಾಯುಪಡೆಯಲ್ಲಿನ ಗಾಯಕರಿಂದ ಈ ವಾದ್ಯಗೋಷ್ಠಿ ನಡೆಯಲಿದೆ. ವಾಯುಪಡೆಯ ಈ ತಂಡದ ಹೆಸರು ಏರ್ ವಾರಿಯರ್ ಸಿಂಫೋನಿ ಆರ್ಕೆಸ್ಟ್ರಾ(ಎಡಬ್ಲ್ಯುಎಸ್ಒ). ಇದನ್ನು ಜಾಲಹಳ್ಳಿ ಏರ್ ಫೋರ್ಸ್ ಸ್ಟೇಷನ್ ನಲ್ಲಿ 2002ರಲ್ಲಿ ಆರಂಭಿಸಲಾಯಿತು. ವಿವಿಧ ಏರ್ ಫೋರ್ಸ್ ಬ್ಯಾಂಡ್ ವೃಂದದಿಂದ ಗಾಯಕರನ್ನು ಆಯ್ಕೆ ಮಾಡಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಈ
ಸಿಂಫೋನಿ ಪಡೆ ದೇಶದ ವಿವಿಧ ನಗರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿದೆ. ಥೈಲಾಂಡ್, ಫಿನ್ ಲ್ಯಾಂಡ್ ಮತ್ತು ಫ್ರಾನ್ಸ್ ದೇಶಗಳಲ್ಲೂ ಕಾರ್ಯಕ್ರಮ ನಡೆಸುತ್ತಿದೆ. ದೇಶ ಪ್ರೇಮ ಮತ್ತು ಏಕತೆಯ ಭಾವನೆಗಳನ್ನು ಮ್ಯೂಸಿಕ್ ನೊಂದಿಗೆ ಕೇಳುವ ಅವಕಾಶವಾಗಿದೆ.











Click it and Unblock the Notifications