ಒಸಾಮಾ ಹೆಂಡತಿಯರು ನನಗೆ ಬೇಕಾಗಿದ್ದಾರೆ: ಒಬಾಮಾ

ಒಬಿಎಲ್ ವಿಧವೆಯರನ್ನು ತಾನು ವಿಚಾರಣೆಗೆ ಒಳಪಡಿಸಿ, ಅಲ್ ಖೈದಾ ಉಗ್ರ ಸಂಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಾಗಿದೆ. ಆದ್ದರಿಂದ ಆ ಮೂವರನ್ನೂ ತನಗೆ ಹಸ್ತಾಂತರಿಸುವಂತೆ ಅಮೆರಿಕ ಸ್ಪಷ್ಟವಾಗಿ ಹೇಳಿದೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಥಾಮಸ್ ಡೊನಿಲಾನ್ ಇದನ್ನು ದೃಢಪಡಿಸಿದ್ದು, ಒಬಿಎಲ್ ಅಡಗುದಾಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರೆ ಅದನ್ನೂ ತನ್ನೊಂದಿಗೆ ಹಂಚಿಕೊಳ್ಳುವಂತೆ ಪಾಕ್ ಗೆ ಅಮೆರಿಕ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.
ಒಬಿಎಲ್ ನಿಧನಾನಂತರದ ಬೆಳವಣಿಗೆಗಳು, ಮಾಹಿತಿಗಳನ್ನು ಪರಾಮರ್ಶಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಇದು ನೇರವಾಗಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications