ಮುಷ್ಕರ ಮುಗಿದಿದೆ: ಏರ್ ಇಂಡಿಯಾಕ್ಕೆ ಮತ್ತೆ ಸ್ವಾಗತ

ಸರಕಾರಿ ಸ್ವಾಮ್ಯದ ಏರ್ ಇಂಡಿಯಾದ ಸುಮಾರು 800ರಷ್ಟು ಪೈಲಟ್ ಗಳು ನಾನಾ ಬೇಡಿಕೆಗಳನ್ನು ಮುಂದಿಟ್ಟು ಕಳೆದ ಹತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಇದರಿಂದ ಶೇಕಡಾ 90ರಷ್ಟು ಏರ್ ಇಂಡಿಯಾ ವಿಮಾನಗಳು ಹಾರಾಟ ನಡೆಸದೆ ಪ್ರಯಾಣಿಕರು ತೊಂದರೆಗೊಳಗಾಗಿದ್ದರು. ವೇತನ ತಾರತಮ್ಯ ವಿಷಯವನ್ನು ಪ್ರಧಾನ ಬೇಡಿಕೆಯಾಗಿಸಿಕೊಂಡು ಪೈಲಟ್ ಗಳು ಮುಷ್ಕರ ನಡೆಸುತ್ತಿದ್ದರು.
ಪೈಲಟ್ ಮುಷ್ಕರದಿಂದ ಏರ್ ಇಂಡಿಯಾಕ್ಕೆ ಸುಮಾರು 150 ಕೋಟಿ ರು. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಕನಿಷ್ಠ 75 ಗಂಟೆ ನಿಶ್ಚಿತ ಹಾರಾಟ ಅವಧಿಯ ಪರಿಹಾರ ಭತ್ಯೆ ನೀಡಲು ಸರಕಾರ ಒಪ್ಪಿಕೊಂಡಿದೆ. ಸಂಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ವಿಮಾನ ನೌಕರರ ಸಂಘಕ್ಕೆ ಮಾನ್ಯತೆ ನೀಡಲು ಸಹ ಸರಕಾರ ಒಪ್ಪಿಕೊಂಡಿರುವುದರಿಂದ ಮುಷ್ಕರವನ್ನು ಕೊನೆಗೊಳಿಸಿದ್ದಾರೆ.
"ಈ ಹಿಂದೆ ಇಂಡಿಯನ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ, ನಂತರ ಏರ್ ಇಂಡಿಯಾದೊಂದಿಗೆ ವಿಲೀನ ಗೊಂಡ ಸುಮಾರು 800 ಪೈಲಟ್ ಗಳು ಶುಕ್ರವಾರ ರಾತ್ರಿಯಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಭಾರತದ ವಾಣಿಜ್ಯ ಪೈಲಟ್ ಸಂಘದ ಅಧ್ಯಕ್ಷ ಎ. ಎಸ್. ಭಿಂದರ್ ತಿಳಿಸಿದ್ದಾರೆ.











Click it and Unblock the Notifications