ಟ್ವಿಟ್ಟರ್‌ನಲ್ಲಿ ಖಾತೆ ತೆರೆದ ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು,
ಮೇ.6: ಸಾಮಾನ್ಯವಾಗಿ ರಾಜಕಾರಣಿಗಳಿಗಿಂತ ಸಿನಿಮಾ ತಾರೆಗಳೇ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುತ್ತಾರೆ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಬೆರಳೆಣಿಕೆಯಷ್ಟು ಮಂದಿ ರಾಜಕಾರಣಿಗಳು ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಶಶಿ ತರೂರ್, ನರೇಂದ ಮೋದಿ, ಎಸ್ ಎಂ ಕೃಷ್ಣ, ರಾಜೀವ್ ಚಂದ್ರಶೇಖರ್, ಕ್ಯಾಪ್ಟನ್ ಗೋಪಿನಾಥ್, ಕೃಷ್ಣ ಭೈರೇಗೌಡ, ರಾಜೀವ್ ಗೌಡ ಅವರಂತಹ ರಾಜಕಾರಣಿಗಳನ್ನು ಹೆಸರಿಸಬಹುದು. id="toptextpromo">ಈಗ
ಈ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸೇರ್ಪಡೆಯಾಗಿದ್ದಾರೆ. ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಲು ಹಾಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಟ್ವಿಟ್ಟರ್ ತಮಗೆ ಪ್ರಮುಖ ವೇದಿಕೆಯಾಗಲಿದೆ ಎಂಬುದನ್ನು ಎಚ್ಡಿಕೆ ತಡವಾಗಿಯಾದರೂ ಗ್ರಹಿಸಿರುವುದು ವಿಶೇಷ. id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರದ
ವಿರುದ್ಧ ಧ್ವನಿಯೆತ್ತಿರುವ ಜೆಡಿಎಸ್, ಪಕ್ಷಾತೀತ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಟ್ವಿಟ್ಟರ್ ಮೂಲಕ ಕುಮಾರಸ್ವಾಮಿ ಹಂಚಿಕೊಳ್ಳಲಿದ್ದಾರಂತೆ. ಕುಮಾರಸ್ವಾಮಿ ಅವರ ಖಾತೆ ವಿಳಾಸ ಹೀಗಿದೆ. ಆದರೆ ಅವರನ್ನು ಹಿಂಬಾಲಿಸುತ್ತಿರುವವರ ಸಂಖ್ಯೆ ಮಾತ್ರ ದಯನೀಯವಾಗಿದ್ದು ಬೇಸರ ತರಿಸುವಂತಿದೆ.











Click it and Unblock the Notifications