ಒಸಾಮಾ ಜಾಗಕ್ಕೆ ಅವ್ಲಕಿ ಲಾಡೆನ್ ಬರುತ್ತಾನಂತೆ!
ಲಂಡನ್,
ಮೇ 6: ಒಸಾಮಾ ಬಿನ್ ಲಾಡೆನ್ ಅಂತ್ಯವಾಗಿದೆ. ಆದರೆ ಆತನ ಸ್ಥಾನ ತುಂಬುವರಿಗಾಗಿ ಆಲ್ ಖೈದಾ ಹುಡುಕಾಟದಲ್ಲಿದೆಯೆಂದು ವರದಿಯೊಂದು ಹೇಳಿದೆ. ಲಾಡೆನ್ ಸ್ಥಾನಕ್ಕೆ ಇಂಟರ್ ನೆಟ್ ಲಾಡೆನ್ ಖ್ಯಾತಿಯ ಅನ್ವರ್ ಅಲ್ ಅವ್ಲಕಿಯನ್ನು ನೇಮಿಸುವ ಕುರಿತು ಆಲ್ ಖೈದಾ ಚಿಂತನೆ ನಡೆಸುತ್ತಿದೆ ಎಂದು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದೆ. id="toptextpromo">ಯೆಮನ್
ಮೂಲದ ಅನ್ವರ್ ಅಲ್ ಅವ್ಲಕಿ ಇಂಟರ್ ನೆಟ್ ನಲ್ಲಿ ಭಯೋತ್ಪಾದನೆ ಹರಡುವಲ್ಲಿ ಮುಂಚೂಣಿಯಲ್ಲಿರುವಾತ. ಸದ್ಯದ ಟೆಕ್ನಾಲಜಿ ಜಗತ್ತಿನಲ್ಲಿ ಉಗ್ರವಾದ ದಟ್ಟವಾಗಿ ಹಬ್ಬುವಲ್ಲಿ ಈ ಅವ್ಲಕಿಯ ಪಾತ್ರ ಹಿರಿದು ಎನ್ನಲಾಗಿದೆ. ಅಮೆರಿಕದಲ್ಲಿ ಹುಟ್ಟಿದ ಈತನನ್ನು ಇಂಟರ್ ನೆಟ್ ಲಾಡೆನ್ ಎಂದು ಕರೆಯಲಾಗುತ್ತದೆ. ಆಲ್ ಖೈದಾ ಲಾಡೆನ್ ಸ್ಥಾನಕ್ಕೆ ಪೂರ್ಣ ಪ್ರಮಾಣದಲ್ಲಿ ಈತನನ್ನು ನಿಯುಕ್ತಿಗೊಳಿಸುವ ಕುರಿತು ಆಲ್ ಖೈದಾ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅವ್ಲಕಿ
ಯೆಮನ್ ನಿಂದ 2007ರಲ್ಲಿ ಓಡಿ ಹೋಗಿದ್ದ. ಆತ ಅದೇ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಇವನು ಭಯೋತ್ಪಾದಕರ ನೇಮಕಾತಿ, ತರಬೇತಿ ನೀಡುವನಾಗಿದ್ದಾನೆ. ನಲ್ವತ್ತರ ಪ್ರಾಯದ ಈತ ಬ್ಲಾಗ್, ಫೇಸ್ ಬುಕ್ ಪುಟ ಹೊಂದಿದ್ದು, ಹಲವು ಯುಟ್ಯೂಬ್ ವಿಡಿಯೋಗಳನ್ನು ಇಂಟರ್ ನೆಟ್ ನಲ್ಲಿ ಪಸರಿಸುತ್ತಿದ್ದಾನಂತೆ. ಉಗ್ರ ಚಟುವಟಿಕೆಗಾಗಿ ನೂತನ ತಂತ್ರಜ್ಞಾನ ಬಳಸುವ ಅವ್ಲಕಿ ಮುಂದಿನ ಲಾಡೆನ್ ಆಗುವ ಸಾಧ್ಯತೆಯಿದೆ ಎಂದು ದಿ ಸನ್ ವರದಿ ಮಾಡಿದೆ.











Click it and Unblock the Notifications