ದಾಳಿ ನಡೆಸಿದರೆ ಜೋಕೆ! ಭಾರತಕ್ಕೆ ಪಾಕ್ ಎಚ್ಚರಿಕೆ

ಪಾಕಿಸ್ತಾನದ ಮೇಲೆ ಕಾರ್ಯಚರಣೆ ಎಂಬುದು ತಮ್ಮ ಅಧಿಕಾರ ಎಂಬಂತೆ ಯಾವುದೇ ದೇಶಗಳು ಪರಿಗಣಿಸಬಾರದು ಎಂದು ಅವರು ಒತ್ತಿ ಹೇಳಿದ್ದಾರೆ. ಲಾಡೆನ್ ವಿರುದ್ಧ ನಡೆಸಿದ ಕಾರ್ಯಚರಣೆಯಂತೆ ಪಾಕಿಸ್ತಾನಕ್ಕೆ ಸಶಸ್ತ್ರ ದಾಳಿ ನಡೆಸಿದರೆ ತಕ್ಕ ಪಾಠ ಕಲಿಸಲಿದ್ದೇವೆ. ಯಾವುದೇ ದೇಶ ಪಾಕ್ ನಲ್ಲಿ ಇಂತಹ ಕಾರ್ಯಚರಣೆ ನಡೆಸಬಹುದೆಂದು ಅಂದುಕೊಂಡಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಪಾಕ್ ಮಿಲಿಟರಿಯೂ ಸದೃಢವಾಗಿದೆ. ನಮ್ಮ ಮಿಲಿಟರಿ, ವಾಯುಸೇನೆಯಲ್ಲಿ ಸಾಕಷ್ಟು ಯೋಧರಿದ್ದಾರೆ. ತಮ್ಮ ರಕ್ಷಣಾ ಬಲವನ್ನು ಪ್ರದರ್ಶಿಸಲು ಪಾಕ್ ಸಮರ್ಥವಾಗಿದೆ. ಇದರಲ್ಲಿ ಯಾವುದೇ ದೇಶಕ್ಕೆ ಅನುಮಾನ ಬೇಡ ಎಂದಿದ್ದಾರೆ. ಪಾಕ್ ಸೇನೆಗೆ ಮಾಹಿತಿ ನೀಡದೆ ಲಾಡೆನ್ ಕಾರ್ಯಚರಣೆ ನಡೆಸಲಾಗಿದೆ. ಇನ್ನು ಮುಂದೆ ಇಂತಹ ತಪ್ಪು ಮಾಡಿದರೆ ಭೀಕರ ದುರಂತಕ್ಕೆ ನಾಂದಿಯಾಗಲಿದ ಎಂದು ಸಲ್ಮಾನ್ ಬಶೀರ್ ಹೇಳಿದ್ದಾರೆ.
ನಾವು ಆಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದೇವು ಎನ್ನುವುದು ಸುಳ್ಳು. ಅಫ್ಘಾನಿಸ್ತಾನದಲ್ಲಿ ಮುಸ್ಲಿಂ ಉಗ್ರರ ವಿರುದ್ಧ ಹೋರಾಟ ನಡೆಸುವಲ್ಲಿ ಐಎಐ ಹಲವು ವರ್ಷಗಳಿಂದ ಅಮೆರಿಕದೊಂದಿಗೆ ಕೈ ಜೋಡಿಸಿದೆ ಎಂದು ಅವರು ಹೇಳಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸರ್ಕಾರದ ಪ್ರಮುಖ ಅಸ್ತ್ರವಾದ ಐಎಸ್‌ಐ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.












Click it and Unblock the Notifications