ಕಿಲ್ ಲಾಡೆನ್ : ಒಬಾಮಾಗೆ ರಾಯಲ್ ದಂಪತಿಯ ಕೃತಜ್ಞತೆ

ಅಂದರೆ ಅತ್ತ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ಮದುವೆಯುಂಗರ ಬದಲಿಸಿಕೊಳ್ಳುತ್ತಿದ್ದರೆ ಇತ್ತ ಅಮೆರಿಕದ ಅಧ್ಯಕ್ಷ ಒಬಾಮಾ ಅವರು ಲಾಡೆನ್ ಸಾವಿಗೆ ಷರಾ ಬರೆಯುತ್ತಿದ್ದರು. ಇದೆಲ್ಲ ಯಾಕೆ ಹೇಳಲಾಗುತ್ತಿದೆಯೆಂದರೆ ಕಳೆದ ತಿಂಗಳಾಂತ್ಯ (ಏ.29) ವಿವಾಹ ಬಂಧನಕ್ಕೀಡಾದ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ಅವರು ಭದ್ರತೆಯ ನೆಪವೊಡ್ಡಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿಗೆ ಆಮಂತ್ರಣ ನೀಡಿರಲಿಲ್ಲ. ಕಾರಣ ಇನ್ನೂ ಏನಾದರೂ ಇರಬಹುದು, ಆದರೆ ನವ ದಂಪತಿಯು ಒಬಾಮಾಗೆ ಕೃತಜ್ಞತೆ ಸಲ್ಲಿಸುವ ಕಾಲ ಈಗ ಒದಗಿಬಂದಿದೆ.
;ಏಕೆಂದರೆ ಒಂದು ವೇಳೆ ವಿವಾಹಕ್ಕೆ ಆಮಂತ್ರಿಸದಿರುವುದನ್ನು ಒಬಾಮಾ ಏನಾದರೂ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು, ನಮ್ಮ ನಿಮ್ಮಂತೆ ಮುನಿಸಿಕೊಂಡಿದ್ದಿದ್ದರೆ ಖಂಡಿತ ಯಾರೂ ಮದುವೆ ನೋಡ್ತಾ ಟೈಂ ವೇಸ್ಟ್ ಮಾಡ್ತಿರಲಿಲ್ಲ. ವಿವಾಹ ಕಾಲೇ ವಿನಾಶ ಕಾಲವೂ ಆಗಿದ್ದಿದ್ದರೆ ಅಂದರೆ 'ಲಾಡೆನ್ ನನ್ನು ಇಂದೇ (ಏ.29) ಮುಗಿಸಿಬಿಡಿ' ಎಂದೇನಾದರೂ ಗುಟುರು ಹಾಕಿದ್ದರೆ ಇಡೀ ಜಗತ್ತು ಒಮ್ಮೆ ಬೆಚ್ಚಿಬಿದ್ದು, ಟಿವಿ ಮುಂದೆ ಪದ್ಮಾಸನ ಹಾಕಿ ಕುಳಿತುಬಿಡುತ್ತಿತ್ತು.
ಅಲ್ಲಿಗೆ ರಾಜ ಮದುವೆಯನ್ನು ಯಾರೂ ನೋಡುತ್ತಿರಲಿಲ್ಲ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸುತ್ತಿತ್ತು. ಇನ್ನು ರೆಡ್ ಅಲರ್ಟ್ ಘೋಷಣೆಯಾಗುತ್ತಿದ್ದಂತೆ ಮದುವೆಗೆ ಬಂದಿದ್ದ ಗಣ್ಯಾತಿಗಣ್ಯರು ದಿಕ್ಕಾಪಾಲಾಗಿ ಓಡಬೇಕಿತ್ತು. ಅದಕ್ಕೆ ಹೇಳೇದೋ ದೊಡ್ಡಣ್ಣ ದೊಡ್ಡಣ್ಣಾನೇ ಅಂತ. ಆತನಿಗೆ ಮಣೆ ಹಾಕುವುದು ಯಾರಿಗೇ ಆಗಲಿ ಶ್ರೇಯಸ್ಕರ. ಏನಂತೀರಿ!? ಮರೆತ ವಿಷಯ, ದೊಡ್ಡಣ್ಣನಿಗೆ ಬೆಣ್ಣೆ ಹಚ್ಚಲು ರಾಯಲ್ ಕುಟುಂಬವು ಒಬಾಮಾ ದಂಪತಿಗೆ ವಿಶೇಷ ಆಹ್ವಾನ ನೀಡಿದ್ದು ಇದೇ ತಿಂಗಳು ಅರಮನೆಗೆ ಆಹ್ವಾನಿಸಿದೆ.
;











Click it and Unblock the Notifications