ರಾಜ್ಯದಲ್ಲಿ ಎಂಜಿನಿಯರಿಂಗ್ ಕಲಿಕೆ ಇನ್ನು ಕೊಂಚ ದುಬಾರಿ
ಬೆಂಗಳೂರು:
ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಕ್ವೋಟಾದ ಮೂಲಕ ದಾಖಲಾದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಖಾಸಗಿ ಕಾಲೇಜುಗಳ ಆಡಳಿತದೊಂದಿಗೆ ರಾಜ್ಯ ಸರಕಾರವು ಹಲವು ಸುತ್ತಿನ ಮಾತುಕತೆ ನಡೆಸಿ ಈ ತೀರ್ಮಾನಕ್ಕೆ ಬಂದಿದೆ. ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಕೆಗೆ ಸರಕಾರಿ ಮೀಸಲಾತಿಯಡಿ ಸೇರುವ ವಿದ್ಯಾರ್ಥಿಗಳು ಇನ್ನು ಮುಂದೆ ವರ್ಷಕ್ಕೆ ಎರಡುವರೆ ಸಾವಿರ ರೂ. ಹೆಚ್ಚು ಪಾವತಿಸಬೇಕಿದೆ. id="toptextpromo">ಮುಂದಿನ
ಶೈಕ್ಷಣಿಕ ವರ್ಷದಿಂದ ಈ ವಿದ್ಯಾರ್ಥಿಗಳಿಗೆ ವಿಧಿಸಲಾಗಿರುವ ವಾರ್ಷಿಕ ಶುಲ್ಕವನ್ನು 30 ಸಾವಿರ ರೂ.ನಿಂದ 32,500 ರೂ.ಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ವಿ. ಎಸ್. ಆಚಾರ್ಯ ಹೇಳಿದ್ದಾರೆ. ಆದಗ್ಯೂ ಸರಕಾರಿ ಮತ್ತು ಸರಕಾರಿ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಶುಲ್ಕ(ವರ್ಷಕ್ಕೆ 15 ಸಾವಿರ ರೂ.)ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಶುಲ್ಕ ಹೆಚ್ಚಳ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. id='are-slot-1' class='oiad oi-axt oiadv'> id='top-searched-articles'>ಇದರೊಂದಿಗೆ
ಎಂಜಿನಿಯರಿಂಗ್ ಸೀಟ್ ಗಳಲ್ಲಿ ಸರಕಾರಿ ಕ್ವೋಟಾವನ್ನುಶೇಕಡಾ 5ರಷ್ಟು (ಶೇ. 50ರಿಂದ ಶೇಕಡ 45ಕ್ಕೆ) ಕಡಿಮೆ ಮಾಡಲಾಗಿದೆ. ಆದರೆ ಈ ಬದಲಾವಣೆಯನ್ನು ಆನ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್(ಎಐಸಿಟಿಇ) ನಿರ್ದೇಶನದಂತೆ ಮಾಡಲಾಗಿದ್ದು ಬಾಕಿ ಉಳಿದ ಶೇಕಡ 5 ಸೀಟುಗಳನ್ನು ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಲಾಗಿದೆ. ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ಇದರಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎನ್ನಲಾಗಿದೆ.











Click it and Unblock the Notifications