ಮಡಿಕೇರಿಯಲ್ಲಿ ಹೂವಿನ ಚಿತ್ತಾರ, ನೋಡಲು ಬಾರಾ!
ಮಡಿಕೇರಿ,
ಮೇ 3: ಬೃಹತ್ ಪುಷ್ಪ ಮತ್ತು ತೋಟಗಾರಿಕಾ ಪ್ರದರ್ಶನವು ಮಡಿಕೇರಿಯ ರಾಜಾ ಸೀಟ್ ಉದ್ಯಾನವನದಲ್ಲಿ ಮೇ 6ರಂದು ಆರಂಭವಾಗಲಿದೆ. ಮೇ ಎಂಟರ ತನಕ ಇರುವ ಈ ಪ್ರದರ್ಶನಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಇಂತಹ ಪ್ಲವರ್ ಶೋನಿಂದ ಜಿಲ್ಲೆಗೆ ಸುಮಾರು 12 ಲಕ್ಷ ಆದಾಯವಾಗಿತ್ತು. id="toptextpromo">ಅಲಂಕಾರಿಕ
ಹೂವುಗಳು, ಹೂವಿನ ವಿನ್ಯಾಸಗಳು, ತರಕಾರಿ ಮತ್ತು ತೋಟಗಾರಿಕಾ ಉತ್ಪನ್ನಗಳಿಂದ ಬೃಹತ್ ಗಾತ್ರದ ದೇವರು, ದೇವತೆಗಳು ಮತ್ತು ನಾಯಕರ ಪ್ರತಿಮೆಗಳು ಈ ಪ್ಲವರ್ ಶೋನ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಪ್ಲವರ್ ಶೋ ಆಯೋಜನಾ ಮಂಡಳಿಯ ಮಾಹಿತಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಮೊದಲಬಾರಿಗೆ
ರಾಜಾಸೀಟ್ ನಲ್ಲಿ ಪ್ಲವರ್ ಬೆಡ್ ಕಲ್ಪನೆಯನ್ನು ಮಾಡಲಾಗಿದೆ. ಊಟಿ ಮುಂತಾದ ಕಡೆಯಲ್ಲಿ ಸಿಗುವ ಅಂದವಾದ ಹೂವುಗಳಿಂದ ಈ ಪ್ಲವರ್ ಬೆಡ್ ರಚಿಸಲಾಗುತ್ತದೆ. ಇದರೊಂದಿಗೆ ಕಲಾತ್ಮಕ ಜಲಪಾತ ಈ ಪ್ಲವರ್ ಶೋನಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ. ಈ ಬೃಹತ್ ಪುಷ್ಪ ಪ್ರದರ್ಶನಕ್ಕೆ ಮಳೆ ಅಡ್ಡಿ ಮಾಡದಿರಲಿ ಎಂಬುದೇ ಸದ್ಯ ಆಯೋಜಕರ ಚಿಂತೆ.











Click it and Unblock the Notifications