ಗುಲ್ಬರ್ಗಾದಲ್ಲಿ ಕಾರು ಅಪಘಾತ, ಮೂರು ಸಾವು

ಗುಲ್ಬರ್ಗಾ, ಮೇ 3: ಜಿಲ್ಲೆಯ ಕಮಲಾಪುರ ನಗರದಲ್ಲಿ ನಿನ್ನೆ ರಾತ್ರಿ ಕಾರೊಂದು ಕಮರಿಗೆ ಉರುಳಿ ಮೂರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಹೈದರಾಬಾದ್ ಸಂಬಂಧಿಕರ ಮನೆಯಿಂದ ಊರಿಗೆ ಹಿಂದುರುಗುತ್ತಿದ್ದಾಗ ರಸ್ತೆ ಬದಿಯಲ್ಲಿನ ಸುರಕ್ಷತೆಗೆ ಅಳವಡಿಸಿರುವ ಪಿಲ್ಲರ್ ಗೆ ಡಿಕ್ಕಿಹೊಡೆದು ಈ ದುರ್ಘಟನೆ ನಡೆದಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ಶಿವರುದ್ರಪ್ಪ(70), ಗುಲ್ಬರ್ಗಾದಲ್ಲಿ ವೈದ್ಯರಾಗಿರುವ ಜಗನ್ನಾಥ್ ಪಾಟೀಲ್(48) ಮತ್ತು ಜ್ಯುವಲೆರಿ ಶಾಪ್ ಒಂದರ ಮಾಲೀಕರಾದ ಅಣ್ಣಾರಾಚ್ ಎಸ್ ಸರದಗಿ ಎಂದು ಗುರುತಿಸಲಾಗಿದೆ. ನಾಗೇಂದ್ರ ಎಂಬವರು ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+