ಗೆಲುವಿನ ನಗೆ ಬೀರಿದ ಅಧ್ಯಕ್ಷ ಒಬಾಮಾ

ವಾಷಿಂಗ್ಟನ್, ಮೇ. 02 : ಅಲ್ ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕ ಮಿಲಿಟರಿ ದಾಳಿಯಲ್ಲಿ ಸೋಮವಾರ ಬೆಳಗ್ಗೆ (ಮೇ 2) ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೋಮವಾರ ಬೆಳಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

'ಇಸ್ಲಾಮಾಬಾದಿಗೆ ಸಮೀಪದಲ್ಲೇ ಇರುವ ಬಂಗಲೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ನೇತೃತ್ವದ ಪಡೆಗಳು ಕಾರ್ಯಾಚರಣೆ ನಡೆಸಿದವು. ತೀವ್ರ ಗುಂಡಿನ ದಾಳಿಯಲ್ಲಿ ಒಸಾಮಾ ಸೇರಿದಂತೆ ಇನ್ನೂ 20 ಉಗ್ರರು ಹತರಾಗಿದ್ದಾರೆ. ಆದರೆ ಅಮೆರಿಕ ಯೋಧರಾಗಲಿ ಅಥವಾ ಇತರೆ ನಾಗರಿಕರಾಗಲಿ ಘಟನೆ ವೇಳೆ ಸಾವಿಗೀಡಾಗಿಲ್ಲ' ಎಂದು ಒಬಾಮಾ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

'ನಿರ್ದಿಷ್ಟ ಭವನದಲ್ಲಿ ಲಾಡೆನ್ ಅವಿತಿದ್ದಾನೆ ಎಂಬ ಖಚಿತ ಮಾಹಿತಿ ಬರುತ್ತಿದ್ದಂತೆ ಉಗ್ರನ ವಿರುದ್ಧ ಅಂತಿಮ ಕಾರ್ಯಾಚರಣೆ ನಡೆಸುವಂತೆ ನಾನೇ ಆದೇಶಿಸಿದೆ' ಎಂದೂ ಒಬಾಮಾ ಹೇಳಿದರು.

ಇದನ್ನೂ ಓದಿ : ಬಿನ್ ಲಾಡೆನ್ ಮಟಾಷ್, ಅಮೆರಿಕದಲ್ಲಿ ವಿಜಯೋತ್ಸವ

'ಇಡೀ ವಿಶ್ವಕ್ಕೆ ಇದು ಐತಿಹಾಸಕ ದಿನ. 9/11ರ ದಾಳಿಯಲ್ಲಿ ಸಾವಿಗೀಡಾದವರ ಕುಟುಂಬ ವರ್ಗಕ್ಕೆ ನಾನು ಹೇಳುವುದಿಷ್ಟೆ - ನ್ಯಾಯ ಸಂದಾಯವಾಗಿದೆ' ಎಂದು ಒಬಾಮಾ ಹೇಳಿದರು. ಲಾಡೆನ್ ವಿರುದ್ಧ ಸಾರಲಾಗಿದ್ದ ಕಾರ್ಯಾಚರಣೆಯಲ್ಲಿ ಅಹಿರ್ನಿಶಿ ದುಡಿದ ಗುಪ್ತಚರ ಅಧಿಕಾರಿಗಳಿಗೆ ಅಭಿವಂದನೆ ಸಲ್ಲಿಸಿದ ಒಮಾಬಾ, ಇದೇ ವೇಳೆ ಸಂಪೂರ್ಣ ಸಹಕಾರ, ನೆರವು ನೀಡಿದ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿ ಅವರಿಗೂ ವಂದಿಸಿದರು.

ಇದೇ ವೇಳೆ, 'ಭಯೋತ್ಪಾದನೆ ವಿರುದ್ಧದ ಸಮರ ಜಾರಿಯಲ್ಲಿರುತ್ತದೆ. ಅದು ಎಷ್ಟೇ ದೀರ್ಘವಾದರೂ ಒಂದಂತೂ ಸ್ಪಷ್ಟ ಭಯೋತ್ಪಾದನೆ ವಿರುದ್ಧ ನ್ಯಾಯ ಸಂದಾಯವಾಗುವಂತೆ ಹೋರಾಡುವುದು ಖಚಿತ' ಎಂದು 9/11ರ ದಾಳಿ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು. ಬುಷ್ ಲಾಡೆನ್ ಸಾವಿನ ಕುರಿತು ನೀಡಿದ ಸಂದೇಶದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+