ಎಐಇಇಇ ಪ್ರಶ್ನೆ ಪತ್ರಿಕೆ ಬಯಲು; ನಾಲ್ವರ ಬಂಧನ

ದೇಶದಾದ್ಯಂತ ಭಾನುವಾರ (ಮೇ.1) ಎಐಇಇಇ ನಡೆಯುತ್ತಿದೆ. ಈ ಪರೀಕ್ಷೆಯನ್ನು ಎಲ್ಲ ರಾಜ್ಯಗಳಿಂದ 115 ಲಕ್ಷ ಮಂದಿ ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಬಹಿರಂಗವಾದ ಕಾರಣ ಪರೀಕ್ಷೆಯನ್ನು ಮುಂದೂಡಿದ್ದಾಗಿ ಮೂಲಗಳು ತಿಳಿಸಿವೆ.ಆದರೆ ಪರೀಕ್ಷೆಯನ್ನು ಯಾಕೆ ಮುಂದೂಡಲಾಗಿದೆ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರಕಟನೆ ಹೊರಡಿಸಿಲ್ಲ.
ಎಐಇಇಇ ಪೇಪರ್ 1 ಪ್ರಶ್ನೆಪತ್ರಿಕೆ ಬಯಲಾದ ಕಾರಣ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಬೆಳಗ್ಗೆ 9.30ಕ್ಕೆ ಇದ್ದ ಪರೀಕ್ಷೆಯನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 2ಕ್ಕೆ ನಡೆಯಬೇಕಾಗಿದ್ದ ಎಐಇಇಇ ಪೇಪರ್ 2 ಪರೀಕ್ಷೆಯನ್ನು ಸಂಜೆ 4ಕ್ಕೆ ಮುಂದೂಡಲಾಗಿದೆ.












Click it and Unblock the Notifications