ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತ, ಪ್ರವಾಹ: 306ಕ್ಕೆ ತಲುಪಿದ ಸಾವಿನ ಸಂಖ್ಯೆ

|
Google Oneindia Kannada News

US Flag
ಅಲಬಾಮಾ: ಅಮೆರಿಕದ ದಕ್ಷಿಣ ಭಾಗದ ಏಳು ಪ್ರಾಂತ್ಯಗಳಲ್ಲಿ ಭೀಕರ ಚಂಡಮಾರುತ ಮತ್ತು ಪ್ರವಾಹದಿಂದ ಮೃತರಾದವರ ಸಂಖ್ಯೆ 306ಕ್ಕೆ ತಲುಪಿರುವುದಾಗಿ ಮೂಲಗಳು ತಿಳಿಸಿವೆ. ಅನೇಕ ಕಟ್ಟಡಗಳು, ಶಾಲೆಗಳು, ಮರಗಳು, ನೆಲಕಚ್ಚಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಅಲ್ಲಿನ ಆಡಳಿತವು ಪರಿಸ್ಥಿತಿ ಹತೋಟಿಗೆ ಅವಿರತವಾಗಿ ಶ್ರಮಿಸುತ್ತಿದೆ.

ಪ್ರಬಲ ಚಂಡಮಾರುತ ಅಲಬಾಮಾದ ತುಸ್ ಕಲುಸಾ ಪ್ರದೇಶವನ್ನೇ ನಿರ್ನಾಮ ಮಾಡಿ ಹಾಕಿದೆ. ಅಲಬಾಮ ನಗರದ ಹಲವು ಕಟ್ಟಡಗಳು ನೆಲಸಮವಾಗಿವೆ. ಮಿಸಿಸಿಪ್ಪಿ, ಜಾರ್ಜಿಯಾ, ಟೆನ್ನೆಸ್ಸೆ ಇತ್ಯಾದಿ ಪ್ರದೇಶಗಳಲ್ಲೂ ಸಾವುನೋವಿನ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾದಲ್ಲಿ 2005ರಲ್ಲಿ ಸಂಭವಿಸಿದ ಕಟ್ರಿನಾ ನಂತರದ ಭೀಕರ ನೈಸರ್ಗಿಕ ದುರಂತ ಇದಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

"ಅಮೆರಿಕಾ ಇತಿಹಾಸದಲ್ಲಿಯೇ ಇದು ಪ್ರಬಲ ದುರಂತ, ಹಿಂದೆಂದೂ ಹೀಗಾಗಿರಲಿಲ್ಲ" ಎಂದು ಅಲಬಾಮಾ ಗವರ್ನರ್ ರಾಬರ್ಟ್ ಬ್ರಂಟ್ಲಿ ಹೇಳಿದ್ದಾರೆ. ಇಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಅಲಬಾಮಾ ನಗರದಲ್ಲಿಯೇ ಸುಮಾರು 204 ಜನರು ಸಾವನ್ನಪ್ಪಿದ್ದು, 1,700 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಟೆಕ್ಸಾಸ್ ಮತ್ತು ಜಾರ್ಜಿಯಾ ಕಡೆಯಿಂದ ಚಂಡಮಾರುತ ಬೀಸಿತ್ತು. ಅಲಬಾಮಾ ಸೇರಿದಂತೆ ಚಂಡಮಾರುತ ಪೀಡಿತ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ರಾಷ್ಟ್ರೀಯ ಪರಿಹಾರ ಪಡೆಯ ನೆರವನ್ನು ಪರಿಹಾರಕ್ಕಾಗಿ ಪಡೆಯುತ್ತಿದೆ.

English summary
In one of the worst natural calamities to have hit the United States of America recently, tornadoes and violent storms ripped through seven Southern states that led to the death of 306 people according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X