ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಯರ್ ಸ್ಥಾನ ಅಲಂಕರಿಸಲು ಯಾರು ಹಿತವರು ಇವರಲ್ಲಿ ?

By Srinath
|
Google Oneindia Kannada News

Sharadamma and Roopa
ಬೆಂಗಳೂರು, ಏಪ್ರಿಲ್ 27: ಮೀಸಲಾತಿ ಪ್ರಕಾರ ಈ ಬಾರಿ ಪರಿಶಿಷ್ಟ ಜಾತಿಯ ಮಹಿಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಾನವನ್ನು ಅಲಂಕರಿಸಲಿದ್ದಾರೆ. ಅದರಂತೆ ಶೆಟ್ಟಿಹಳ್ಳಿಯ ಶಾರದಮ್ಮ(ಎಡ ಚಿತ್ರ) ಮತ್ತು ಬಿಳೇಕಹಳ್ಳಿಯ ರೂಪಾ ರಮೇಶ್ (ಬಲ ಚಿತ್ರ) ನಡುವೆ ಪೈಪೋಟಿ ಏರ್ಪಟ್ಟಿದೆ. ಸಿಲಿಕಾನ್ ಸಿಟಿಗೆ ಈ ಬಾರಿ ಪದವೀಧರ ಕಾರ್ಪೊರೇಟರೊಬ್ಬರು ಮೇಯರ್ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ ಅಖಾಡದಲ್ಲಿರುವ ಶಾರದಮ್ಮ ಎಸ್ಸೆಸ್ಸೆಲ್ಸಿ ಮಾಡಿಕೊಂಡಿದ್ದರೆ ರೂಪಾ ಪಿಯುಸಿ ಘಟ್ಟ ತಲುಪಿದ್ದಾರೆ.

ಅಂದಹಾಗೆ ಒಂದು ವರ್ಷದ ಅವಧಿಗೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ BBMP ಕೌನ್ಸಿಲ್ ಸಭೆ ಏಪ್ರಿಲ್ 29ರಂದು ಸೇರಲಿದೆ. ರೂಪಾ ಅವರು ಹುದ್ದೆ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ ಎನ್ನಬಹುದು. ಆದರೆ ರಾಜಕೀಯ ಸಮೀಕರಣದಲ್ಲಿ ಶಾರದಮ್ಮ ರಾಮಾಂಜನೇಯ ಕೈಮೇಲಾಗುವ ಸಾಧ್ಯತೆ ಇದೆ. ಕುತೂಹಲಕಾರಿ ಸಂಗತಿಯೆಂದರೆ ಕಣದಲ್ಲಿರುವ ಇಬ್ಬರೂ ಮೊದಲ ಬಾರಿಗೆ ಬಿಬಿಎಂಪಿಗೆ ಆಯ್ಕೆಯಾಗಿದ್ದಾರೆ.

ಐದನೇ ಮಹಿಳಾ ಮೇಯರ್ ಆಯ್ಕೆಗಾಗಿ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರು ಮಂಗಳವಾರ ಹೋಟೆಲೊಂದಲ್ಲಿ ಸಭೆ ನಡೆಸಿದರು. ಆದರೆ ಯಾರದೇ ಹೆಸರನ್ನು ಅಂತಿಮಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ. ಗೃಹ ಸಚಿವ ಆರ್. ಅಶೋಕ್ ಅವರು ಶಾರದಮ್ಮ ಆಯ್ಕಗೆ ಒಲವು ತೋರಿದ್ದರೆ ಶಾಸಕ ಸತೀಶ್ ರೆಡ್ಡಿ ಅವರು ರೂಪಾ ಅವರೇ ಮೇಯರ್ ಆಗಬೇಕೆಂದು ಭಾರಿ ಹೋರಾಟ ನಡೆಸಿದ್ದಾರೆ.

ಇನ್ನು, ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ವರ್ಗಕ್ಕೆ (ಎ ಕೆಟಗರಿ) ಮೀಸಲಾಗಿದೆ. ಇದು ಶಾಕಾಬಾಯಿ ನಗರದ ಬಿ. ಸೋಮಶೇಖರ್ ಅವರ ಪಾಲಾಗುವ ಸಾಧ್ಯತೆ ಇದೆ. ಇವರು ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಅವರ ನಿಕಟವರ್ತಿ ಜತೆಗೆ ಜಾಂತಿಬಾಂಧವರು ಹೌದು.

ಬೆಂಗಳೂರಿನಂತಹ ಮಹತ್ವದ ನಗರಕ್ಕೆ ಉತ್ತಮ ಶಿಕ್ಷಣದ ಜತೆಗೆ ಸಮರ್ಥವಾಗಿ ಆಡಳಿತ ನಿಭಾಯಿಸುವ ಸಾಮರ್ಥ್ಯವೂ ಇರಬೇಕು. ಈ ಹಿನ್ನೆಲೆಯಲ್ಲಿ ಮೇಯರ್ ಗಾದಿಯಲ್ಲಿ ಯಾರು ಕುಳಿತುಕೊಳ್ಳುತ್ತಾರೋ ನೋಡಬೇಕಿದೆ. BBMPಯ ಒಟ್ಟು ಕೌಲ್ಸಿಲರ್ ಗಳ ಸಂಖ್ಯೆ 198. ಪದವೀಧರರು 26 ಮಂದಿ. ಎಸ್ಎಸ್ಎಲ್ ಸಿಗಿಂತ ಕಡಿಮೆ ಓದಿರುವವರ ಸಂಖ್ಯೆ 60. ಉಳಿದವರೆಲ್ಲ ಪಿಯುಸಿ, ಡಿಪ್ಲೊಮಾ, ಐಐಟಿ ಮಾಡಿದ್ದಾರೆ.
ಈ ಮಧ್ಯೆ, ಎಂ.ಟೆಕ್ ಮಾಡಿರುವ ನಮ್ಮ ಉಪ ಮೇಯರ್ ಎನ್. ದಯಾನಂದ ಅವರ ವಿವಾಹ ಇಂದು ಅಸ್ಟಿನ್ ಟೌನ್ ನ ಜಸ್ಮಾ ಮಂದಿರದಲ್ಲಿ ಅದ್ದೂರಿಯಾಗಿ ನಡೆದಿದೆ. ಅವರ ವೈವಾಹಿಕ ಜೀವನಕ್ಕೆ ಶುಭವಾಗಲಿ.

English summary
The mayor's post for BBMP is reserved for a woman from the Scheduled Caste. Sharadamma, one of the contenders for the post is a councillor from Shattihalli, is SSLC qualified, while (right) Roopa Ramesh, a councillor from Bilekahalli, has completed her PUC
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X