ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಪೈಲಟ್ ಮುಷ್ಕರ: ತ್ರಿಶಂಕುವಿನಲ್ಲಿ ಪ್ರಯಾಣಿಕರು

By Srinath
|
Google Oneindia Kannada News

Air India pilots strike
ಮುಂಬಯಿ, ಏಪ್ರಿಲ್ 27: ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸುಮಾರು 800 ವಿಮಾನ ಪೈಲಟ್ ಗಳು ನಾನಾ ಬೇಡಿಕೆಗಳನ್ನು ಮುಂದಿದ್ದು ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದ ರಜಾ ಕಾಲದಲ್ಲಿ ಪ್ರವಾಸಗಳ ಕನಸು ಹೊತ್ತಿದ್ದ ಪ್ರಯಾಣಿಕರಿಗೆ ಭ್ರಮನಿರಸನವಾಗಿದೆ. ದೇಶಾದ್ಯಂತ ಏರ್ ಇಂಡಿಯಾದ ಅನೇಕ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಪೈಲಟ್ ಗಳ ಮುಷ್ಕರ ಆರಂಭವಾಗಿದೆ. ದೈನಂದಿನ ಪೈಲಟ್ ಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಕಾರ್ಯಕಾರಿ ಪೈಟಲ್ ಗಳ ಸೇವೆ ಬಳಸಿಕೊಳ್ಳುತ್ತಿರುವ ಏರ್ ಇಂಡಿಯಾ ಇದುವರೆಗೆ ಕೆಲವೇ ವಿಮಾನಗಳನ್ನು ಸಂಚಾರಕ್ಕೆ ಬಿಟ್ಟಿದೆ. ಇದರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೂ ಸಂಚಕಾರ ಬಂದಿದೆ. ಏರಿಂಡಿಯಾ ಒಟ್ಟು 1200 ಪೈಲಟ್ ಗಳನ್ನು ಹೊಂದಿದೆ.

ವೇತನ ತಾರತಮ್ಯ ವಿಷಯವನ್ನು ಪ್ರಧಾನ ಬೇಡಿಕೆಯಾಗಿಸಿಕೊಂಡು ಪೈಲಟ್ ಗಳು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ, ಮುಷ್ಕರವನ್ನು ಕಾನೂನುಬಾಹಿರ ಎಂದು ಸಾರಿದ್ದು, Indian Commercial Pilots' Association (ICPA) ಒಕ್ಕೂಟಕ್ಕೆ ನೀಡಿದ್ದ ಮನ್ನಣೆಯನ್ನು ಅನೂರ್ಜಿತಗೊಳಿಸಿದೆ. ಮುಷ್ಕರ ನಡೆಸುವುದಿಲ್ಲ ಎಂದು ಪೈಲಟ್ ಗಳು ಈ ಹಿಂದೆ ವಾಗ್ದಾನ ನೀಡಿದ್ದರು. ಆದರೆ ಈಗ ಮತ್ತೆ ಮುಷ್ಕರ ನಡೆಸುತ್ತಿದ್ದಾರೆ ಎಂದು ಏರ್ ಇಂಡಿಯಾ ಆಡಳಿತ ಮಂಡಳಿಯು ಕಿಡಿಕಾರಿದೆ. ಮಂಡಳಿಯು ತನ್ನ ಪೈಲಟ್ ಗಳ ವಿರುದ್ಧ ತಕ್ಷಣವೇ ನ್ಯಾಯಾಲಯದ ಕಟಕಟೆ ಹತ್ತುವ ನಿರೀಕ್ಷೆಯಿದೆ.

English summary
Around 800 Air India pilots of the erstwhile Indian Airlines have gone on a strike to press for their various demands, ruining the holiday plans of thousands of passengers in the process. The strike was called Tuesday midnight. The pilots have struck work demanding parity in pay with Air India pilots and other issues related to work conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X